ಕುಮಟಾ: ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿ ಮುಟ್ಟಿದ ಪರಿಣಾಮ ಶಾಕ್ ಹೊಡೆದು ಮಹಿಳೆಯೊಬ್ಬಳು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಹರಕಡೆಯಲ್ಲಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸುಶೀಲಾ ಶಿವು ಅಂಬಿಗ(65) ಈ ಘಟನೆಯಲ್ಲಿ ಸಾವು ಕಂಡ ದುರ್ದೈವಿ ಮಹಿಳೆ. ಇವರು ಕೂಲಿ ಮಾಡುವವರಾಗಿದ್ದಾರೆ. ಮಧ್ಯಾಹ್ನ ಕೆಲಸ ಮುಗಿಸಿ ಬರುತ್ತಿದ್ದಾಗ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲೊ ಅಥವಾ ಇನ್ನೆನಕ್ಕೊ ಅಲ್ಲೆ ಇದ್ದ ಬೇಲಿಗೆ ಹಾಕಿದ್ದ ತಂತಿ ಹಿಡಿದಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ತಂತಿ ಬೇಲಿಗೆ ಅಕ್ರಮವಿದ್ಯುತ್ ಸಂಪರ್ಕ ನೀಡಲಾಗಿತ್ತೇ ಅಥವಾ ಈ ಬೇಲಿಯ ಸಮೀಪ ಇರುವ ಕಂಬದಿಂದ ತಂತಿ ಬೇಲಿಗೆ ವಿದ್ಯುತ್ ಹರಿದಿದೆಯೇ ಎಂಬ ವರದಿಯನ್ನು ಹೆಸ್ಕಾಂ ನವರು ನೀಡಬೇಕಾಗಿದೆ.
ಇದನ್ನೂ ಓದಿ : ಜೂನ್ ೨೧ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಪಿಎಸ್ಐ ಮಂಜುನಾಥ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಿಯ ಹೆಸ್ಕಾಂ ಅಭಿಯಂತರರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.