ಕುಮಟಾ: ಹೆಗಡೆಯ ಶ್ರೀ ಶಾಂತಿಕಾಂಬಾ ಮೈದಾನದಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಶಾಂತಿಕಾಂಬಾ ಟ್ರೋಫಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಇಂಡಿಯನ್ ಓವರಸೀಸ್ ಬ್ಯಾಂಕ್ (ಐ.ಓ.ಬಿ.) ತಂಡ ಚಾಂಪಿಯನ್ ಆಯಿತು.


ಹೆಗಡೆಯ ಶಾಂತಿಕಾಂಬಾ ಯುವಕ ಸಂಘ ಮೂರು ದಿನಗಳ ಕಾಲ ಈ ಪಂದ್ಯಾವಳಿ ಆಯೋಜಿಸಿತ್ತು. ಇಂದು(ಮೇ ೧೩) ಬೆಳಗಿನ ಜಾವದವರೆಗೆ ನಡೆದ ಫೈನಲ್ ಪಂದ್ಯದಲ್ಲಿ ಶಾಂತಿಕಾಂಬಾ ಟ್ರೋಫಿ ಪಡೆದ ಚಾಂಪಿಯನ್ ತಂಡವು ಕೇರಳದ ಕೆ.ಎಸ್.ಇ.ಬಿ. ತಂಡವನ್ನು ಸೋಲಿಸಿತು. ಇದರಿಂದ ಕೇರಳ ತಂಡ ದ್ವಿತೀಯ ಸ್ಥಾನಗಿಸಿದರೆ, ತೃತೀಯ ಸ್ಥಾನವನ್ನು ಇಂಡಿಯನ್ ಬ್ಯಾಂಕ್ ಪಡೆದುಕೊಂಡಿತು.

ಇದನ್ನೂ ಓದಿ : ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಕ್ಷಣಾರ್ಧದಲ್ಲಿ ಮಾಯ

ಮೂರು ದಿನಗಳ ವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ಪ್ರತಿಷ್ಠಿತ ೫ ತಂಡಗಳು ಹಾಗೂ ಹೆಸರಾಂತ ಆಟಗಾರರು ಪಾಲ್ಗೊಂಡು ವಾಲಿಬಾಲ್‌ನಲ್ಲಿನ ತಮ್ಮ ಕೈಚಳಕ ತೋರಿಸಿದರು. ಮೂರೂ ದಿನ ಜನ ಕಿಕ್ಕಿರಿದು ಪ್ರತಿ ಆಟವನ್ನು ವೀಕ್ಷಿಸಿದರು.

ಇದನ್ನೂ ಓದಿ : ಪ್ರಾಣಿ ಪಕ್ಷಿಗಳ ದಾಹ ನೀಗಿಸುವತ್ತ ರೋಟರಿ ಪರಿವಾರದ ಚಿತ್ತ

ಯುವಕ ಸಂಘದ ಗೌರವಾಧ್ಯಕ್ಷ ಧೀರೂ ಶಾನಭಾಗ ಹಾಗೂ ಯುವಕ ಸಂಘದ ಹಾಲಿ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಪಂದ್ಯ ವೀಕ್ಷಣೆಗೆ ಅನುಕೂಲಕರ ವ್ಯವಸ್ಥೆ ಮಾಡಿದ್ದರು. ಇದು ಕ್ರೀಡಾಭಿಮಾನಿಗಳ ಪ್ರಶಂಸೆಗೆ ಕಾರಣವಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.