ಭಟ್ಕಳ: ಕಳೆದ ವಾರ ಅನಾರೋಗ್ಯದಿಂದ ನಿಧನರಾದ ಮೂಡಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ, ನಿವೃತ್ತ ದೈಹಿಕ ಶಿಕ್ಷಕ ಮಾದೇವ ಬಿಳಿಯ ನಾಯ್ಕರ ಸಂತಾಪ ಸೂಚಕ ಸಭೆ ಇಲ್ಲಿನ ಮೂಡಭಡ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಮಾತನಾಡಿ, ಜೋಯಿಡಾ ತಾಲೂಕಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪರಶುರಾಮ ಕಬ್ಬಡಿ ಟೀಮ್‌ನ ಸಂಸ್ಥಾಪಕರೂ ಹೌದು.
ಪರಿಶುದ್ಧ ಮನಸ್ಸಿನವರಾದ ಮಾದೇವ ನಾಯ್ಕ ಅವರು
ಯಾರಲ್ಲೂ ದ್ವೇಷ ಇಟ್ಟುಕೊಂಡವರಲ್ಲ.
ಕ್ರೀಡೆಯಲ್ಲಿ ಉನ್ನತ ಕನಸನ್ನು ಇಟ್ಟುಕೊಂಡವರು. ಕೇವಲ ಕುಟುಂಬಕ್ಕೆ ಸೀಮಿತವಾಗದ ಅವರು ಹುಟ್ಟಿ ಬೆಳೆದ ಗ್ರಾಮಕ್ಕೆ ಸೀಮಿತವಾದವರು. ನಮ್ಮ ಅವರ ಸ್ನೇಹ ಕಬಡ್ಡಿಯಲ್ಲಿ ಆರಂಭವಾಗಿತ್ತು. 40 ವರ್ಷದ ನಮ್ಮ ಗೆಳೆತನ ಆಗಿತ್ತು. ಯಾವುದೇ ಒಡಕು ಆಗಲಿ, ಅನುಮಾನ ಆಗಲಿ ಇರದೆ ಪರಿಶುದ್ಧ ಸ್ನೇಹವಾಗಿತ್ತು. ಯಾವುದೇ ತಪ್ಪು ಕಂಡಲ್ಲಿ ಒಪ್ಪುತ್ತಿರಲಿಲ್ಲ. ಎಲ್ಲ ಜಾತಿ- ಧರ್ಮ ಮೀರಿ ಬೆಳೆದಂಥವರಾಗಿದ್ದರು. ಎಲ್ಲ ಜಾತಿ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಕಬಡ್ಡಿ ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅದೆಷ್ಟು ಕಬ್ಬಡ್ಡಿ ಪಟುಗಳನ್ನು ಪರಶುರಾಮ ಸ್ಪೋರ್ಟ್ಸ್ ಕ್ಲಬ್‌ಗೆ
ಕರೆತಂದಿದ್ದರು. ಅವರಿಗೆ ತರಬೇತಿ ನೀಡಿ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ್ದಾರೆ. ಅವರ ಕನಸ್ಸನ್ನು ನಾವು ನನಸು ಮಾಡಬೇಕು. ಮಾದೇವ ನಾಯ್ಕ ಅವರ  ಕೊಡುಗೆ ಅಪಾರ. ಇಂದಿನ ಯುವಜನಾಂಗ ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ನನಗೆ ಅಣ್ಣ ತಮ್ಮ ಯಾರೂ ಇಲ್ಲ. ಇವರೇ ನನ್ನ ಅಣ್ಣನ ಸ್ಥಾನದಲ್ಲಿ ನಿಂತವರು. ಯಾವುದೇ ಸಂದರ್ಭದಲ್ಲಿ ನನ್ನ ಬೆನ್ನೆಲುಬಾಗಿ ಇದ್ದವರು ಎಂದು ಭಾವುಕರಾದರು.

ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಜೂನ್ ೨೧ರಿಂದ

ಬಳಿಕ ಮಜ್ಲಿಸ್-ಎ-ಇಸ್ಲಾಹ್ ವಾ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಒಳ್ಳೆ ವ್ಯಕ್ತಿತ್ವ, ಗುಣ ಹೊಂದಿದ ಮಾದೇವ ನಾಯ್ಕ ಅವರು ಕಬಡ್ಡಿ ಆಟದಲ್ಲಿ ಅತ್ಯಂತ ಪರಿಣಿತರಾಗಿದ್ದರು. ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಗೆ ಒಳ್ಳೆಯ ಕೀರ್ತಿ, ಒಳ್ಳೆಯ ಹೆಸರು ತಂದ ವ್ಯಕ್ತಿಯಾಗಿದ್ದರು. ಯಾವುದೇ ಕಬಡ್ಡಿ ಆಟದ ಸಂದರ್ಭದಲ್ಲಿ ಜಾತಿ-ಧರ್ಮ ಭೇದ-ಭಾವ ಎನ್ನದೆ ಉತ್ತಮ ನಿರ್ಣಯ ನೀಡುವಲ್ಲಿ ಅತ್ಯಂತ ಪರಿಶುದ್ಧ ವ್ಯಕ್ತಿಯಾಗಿದ್ದರು. ಸಾವನ್ನೋದು ಪ್ರತಿಯೊಬ್ಬರಿಗೆ ಬರುವಂಥದ್ದು. ಆದರೆ ಅವರು ಮಾಡಿದಂತಹ ಒಳ್ಳೆ ಕೆಲಸವನ್ನು ಗಮನದಲ್ಲಿ ತೆಗೆದುಕೊಂಡು ನಾವು ಎಲ್ಲರೂ ಸೇರಿ ಒಳ್ಳೆ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ : ಜೂನ್‌ ೩ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಬಾಡಿ ಬಿಲ್ಡರ್ಸ್‌ನ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಡಿ.ಭಟ್ಟ ಮಾತನಾಡಿ, ಅವರ ಅಗಲುವಿಕೆಯು ತುಂಬಲಾರದ ನಷ್ಟವಾಗಿದೆ.  ಅವರು ನನಗೆ ಚಿರಪರಿಚಿತರಾಗಿದ್ದರು. ಕ್ರೀಡೆಯ ಪ್ರತಿಯೊಂದು ವಿಧದಲ್ಲೂ ಸಂಪೂರ್ಣ ಸಹಕಾರ ನೀಡಿದ್ದರು. ಎಲ್ಲರೊಡನೆ ಬೆರೆತು, ಎಲ್ಲರ ಪ್ರೀತಿಗೆ ಪಾತ್ರರಾದ ಅವರ ನಡೆನುಡಿ ನಮಗೆಲ್ಲ ಮಾರ್ಗದರ್ಶಿ. ಮೇರು ವ್ಯಕ್ತಿತ್ವ ಹಾಗೂ ಸರ್ವ ಧರ್ಮಗಳನ್ನು ಸಮನಾಗಿ ಗೌರವಿಸುವ ಗುಣ ನಮಗೆಲ್ಲರಿಗೂ ಅದರ್ಶವಾಗಬೇಕು. ಅವರ ಅಗಲಿಕೆಯು  ತುಂಬಲಾರದ ನಷ್ಟವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಸ್ ನಿಲುಗಡೆ ನಾಮಫಲಕ ಉದ್ಘಾಟನೆ

ಈ ಸಂದರ್ಭದಲ್ಲಿ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ನಾಯ್ಕ, ಜಿಲ್ಲಾ ಅಮೆಚೂರ್ ಕಬಡ್ಡಿ ಕಾರ್ಯದರ್ಶಿ ಅನಿಲ್  ಪೂಜಾರಿ, ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಜೀಜುರೆಹಮಾನ್,
ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಾಸು ನಾಯ್ಕ,
ಫ್ರೆಂಡ್ಸ್ ಜಿಮ್ ಮಾಲೀಕ ವೆಂಕಟೇಶ ನಾಯ್ಕ,
ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೆಂಕಟೇಶ ದೇವಡಿಗ, ಹಿರಿಯ ಕಬಡ್ಡಿ ಆಟಗಾರ
ವೆಂಕಟರಮಣ ಮೊಗೇರ, ಜಾಫರ್ ಸಾಧಿಕ, ಸುರೇಶ ನಾಯ್ಕ, ಈಶ್ವರ ನಾಯ್ಕ, ದುರ್ಗಪ್ಪ ನಾಯ್ಕ,
ರಾಮಕೃಷ್ಣ ಕೊಡಿಯಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಮೇಶ ನಾಯ್ಕ ಸರ್ಪನಕಟ್ಟೆ ನಿರೂಪಿಸಿದರು.