ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ದೇವಾಲಯದಲ್ಲಿ ಕಾರ್ತಿಕೇಯನನ್ನು ಎಲ್ಲಾ ಸರ್ಪಗಳ ಅಧಿಪತಿ ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದೈವಿಕ ಸರ್ಪವಾದ ವಾಸುಕಿ ಮತ್ತು ಇತರ ಸರ್ಪಗಳು ಗರುಡನಿಂದ ಬೆದರಿಕೆಗೆ ಒಳಗಾದಾಗ ಸುಬ್ರಹ್ಮಣ್ಯ ಅಡಿಯಲ್ಲಿ ಆಶ್ರಯ ಪಡೆದವು ಎಂದು ಮಹಾಕಾವ್ಯಗಳು ಹೇಳುತ್ತವೆ. ಈ ಕ್ಷೇತ್ರದಲ್ಲಿ ಆಗಾಗ ಪವಾಡಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಅಚ್ಚರಿಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

ಬೀದಿ ನಾಯಿಯೊಂದು ಪುಟ್ಟ ಮಗುವಿನ ಪ್ರಾಣ ಉಳಿಸಿದ ಅಚ್ಚರಿಯ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ೭ನೇ ವೇತನ ಆಯೋಗ ವರದಿ ಬಂದ ನಂತರ ತೀರ್ಮಾನ- ಸಿದ್ದರಾಮಯ್ಯ
ಮಹಿಳೆಯೊಬ್ಬರು ತಮ್ಮ ಮಗುವನ್ನು ರಸ್ತೆ ಬಳಿ ಬಿಟ್ಟು ಹಣ್ಣುಕಾಯಿ ಖರೀದಿಗೆ ಪಕ್ಕದ ಅಂಗಡಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ನಾಗರಹಾವು ರಸ್ತೆ ದಾಟುತ್ತಿತ್ತು. ಮಗು ಹಾವನ್ನು ತುಳಿಯುವಷ್ಟರಲ್ಲಿ ಅಲ್ಲೇ ಮಲಗಿದ್ದ ಬೀದಿನಾಯಿ ಹೋಗಿ ಮಗುವಿಗೆ ಅಡ್ಡ ನಿಂತು ಮಗು ಹಾವನ್ನು ತುಳಿಯದಂತೆ ರಕ್ಷಿಸಿದೆ.‌ ನಂತರ ಹಾವು ರಸ್ತೆ ದಾಟಿದೆ. ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಘಟನೆಗೆ ಆಶ್ಚರ್ಯಚಕಿತರಾಗಿದ್ದಾರೆ.

ಈ ವಿಡಿಯೋ ನೋಡಿ :  https://fb.watch/qtBS726Sgo/?mibextid=Nif5oz
ಈ ಕುರಿತ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೀದಿ ಶ್ವಾನ ಕರಿಯ ಮಗುವನ್ನು ರಕ್ಷಸಿದ್ದು ನಿಜಕ್ಕೂ ಪವಾಡ ಎಂದು ಹಲವರು ಪ್ರತಿಕ್ರಿಯಿಸಿದ್ದರೆ, ಕೆಲವರು ನಾಯಿನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.