ಭಟ್ಕಳ: ಸುಳಿಗಾಳಿಗೆ ಹೋಟೆಲ್ ಹಾಗೂ ಕುಶನ್ ಅಂಗಡಿಯ ಮೇಲ್ಛಾವಣಿ ಹಾರಿ ಹೋದ ಘಟನೆಯೊಂದು ಗಡಿ ಭಾಗದ ಶಿರೂರಿನ ಬಪ್ಪನಬೈಲುವಿನ ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ರಾಷ್ಟ್ರೀಯ ಪಕ್ಕದಲ್ಲಿರುವ ಸಹರಾ ಹೋಟೆಲಿನ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ವೇಳೆ ಹೊಟೇಲ್ ಮಾಲೀಕರು ಮನೆಯಲ್ಲಿದ್ದರು ಎನ್ನಲಾಗಿದೆ. ಹೋಟೆಲ್ ಕೆಲಸಗಾರರು ರೂಮಿನಲ್ಲಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ : ರಾಜ್ಯ ಮಟ್ಟದ ಕರಾಟೆ ರೆಫ್ರಿ ತರಬೇತಿ ಶಿಬಿರ ಯಶಸ್ವಿ

ಅದೇ ರೀತಿ ಸುಳಿಗಾಳಿಗೆ ಹೋಟೆಲ್ ಸಮೀಪವಿದ್ದ ಸನ್ ಶೈನ್ ಕುಶನ್ ಅಂಗಡಿ ಮೇಲ್ಛಾವಣಿ ಕೂಡ ಹಾರಿ ಹೋಗಿ ಅಪಾರ ಹಾನಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಘಟನೆಯಲ್ಲಿ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ಹಾಗೂ ಮರ ಧರೆಗುರುಳಿದೆ.