ಭಟ್ಕಳ: ತಾಲೂಕಿನ ಮುರ್ಡೇಶ್ವರದ ನಿವಾಸಿ ಸ್ಫೂರ್ತಿ ಎಸ್. ಅಡಿಗಳ್ ಅವರಿಗೆ ಪ್ರತಿಷ್ಠಿತ ಮಣಿಪಾಲ ಯುನಿವರ್ಸಿಟಿ ಆಫ್ ಹೈಯರ್ ಎಜ್ಯುಕೇಶನ್ನಿಂದ “ಬಯೋಫಟೋನಿಕ್ಸ” (Biophotonics ) ಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸ್ಫೂರ್ತಿ ಎಸ್. ಅಡಿಗಳ್ ಅವರು ಡಾ. ಸಂತೋಷ ಚಿದಂಗಿಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಹ್ಯೂಮನ್ ಟಿಯರ್ ಸ್ಯಾಂಪಲ್ ಸ್ಟಡೀಸ್ ಯೂಸಿಂಗ್ ಹೈ ಪರ್ಫಾಮೆನ್ಸ್ ಲಿಕ್ವಿಡ್ ಕ್ರೊಮೊಟೋಗ್ರಫಿ ವಿತ್ ಎಲ್ಇಡಿ ಇಂಡ್ಯೂಸ್ಡ ಫ್ಲೋರೋಸೀನ್ (ಎಚ್ಪಿಎಲ್ಸಿ-ಎಲ್ಇಡಿ-ಐಎಫ್) ಆ್ಯಂಡ್ ಸರ್ಫೇಸ್ ಎನ್ಹಾನ್ಸ್ಡ ರಾಮನ್ ಸ್ಪೆಕ್ಟೋಸ್ಕೋಪಿಕ್ ಟೆಕ್ನಿಕ್ಸ್ (ಎಸ್ಇಆರ್ಎಸ್) ನೊಂದಿಗೆ ಹೆಚ್ಚಿನ ಕರ್ಯಕ್ಷಮತೆಯ ಲಿಕ್ವಿಡ್ ಕ್ರೊಮ್ಯಾಟೋಗ್ರಫಿಯನ್ನು ಬಳಸಿಕೊಂಡು ಮಾನವ ಕಣ್ಣೀರಿನ ಮಾದರಿ ಅಧ್ಯಯನಗಳು ಎಂಬ ವಿಷಯದ ಮೇಲಿನ ಅಧ್ಯಯನ ಹಾಗೂ ಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಇದನ್ನೂ ಓದಿ : ೭ ತಿಂಗಳ ಮಗು ಅಪಹರಣ; ದಾಂಡೇಲಿ ವ್ಯಕ್ತಿಯಿಂದ ಭಟ್ಕಳದಲ್ಲಿ ದೂರು
ಸ್ಫೂರ್ತಿ ಅಡಿಗಳ್ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಅಧ್ಯಯನ ಮಾಡಿದ್ದಾರೆ. ಇವರು ಮುರ್ಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವರಾಮ ಅಡಿಗಳ್ ಹಾಗೂ ಗಾಯತ್ರಿ ಅಡಿಗಳ್ ಅವರ ಪುತ್ರಿ.
ಇದನ್ನೂ ಓದಿ : ಜೂನ್ ೨೫ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ