ಅಂಕೋಲಾ : ಪ್ರವಾಸಕ್ಕೆಂದು ತೆರಳಿದ್ದ ವೇಳೆ ನೀರಿಗೆ ಬಿದ್ದು ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ತಾಲೂಕಿನ ಹೊಸಕಂಬಿ ಹಳ್ಳದಲ್ಲಿ ಭಾನುವಾರ ಸಂಜೆ ನಡೆದಿದೆ.

ಬೊಬ್ರವಾಡದ ಸುಹಾಸ ಕೃಷ್ಣ ನಾಯ್ಕ (28) ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾದ ಯುವಕ. ಅಂಕೋಲಾದ 15 ಜನರ ಗೆಳೆಯರ ತಂಡ ಹೊಸಕಂಬಿಯ ಹಳ್ಳದ ವಿಹಂಗಮ ಪ್ರದೇಶದಲ್ಲಿ ಪಾರ್ಟಿ ಮಾಡಲೆಂದು ತೆರಳಿದ್ದಾಗ ಚಿಪ್ಪಿಕಲ್ಲನ್ನು ಆರಿಸಲು ಸುಹಾಸ ನಾಯ್ಕ ಗೆಳಯನೊಂದಿಗೆ ಇನ್ನೊಂದು ಬದಿಗೆ ನೀರಿಗೆ ಇಳಿದಿದ್ದ. ಈ ವೇಳೆ ಇಬ್ಬರು ನೀರಿನ ಹರಿವಿಗೆ ಸಿಲುಕಿದ್ದಾರೆ. ಹರಸಾಹಸ ಪಟ್ಟು ದಡ ಸೇರಿದ್ದಾನೆ. ಆದರೆ ಸುಹಾಸಗೆ ಸರಿಯಾಗಿ ಈಜು ಬರದೇ ಇರುವದರಿಂದ ನೋಡು ನೋಡುತ್ತಲೇ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ.

ಸುಹಾಸನ ಪತ್ತೆಗೆ ಆತನ ಗೆಳೆಯರು ಮತ್ತು ಅಗ್ಬಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪಾರ್ಟಿಗೆ ತೆರಳಿದ್ದ ಗೆಳೆಯರನ್ನು ವಿಚಾರಣೆ ನಡೆಸಿದ್ದಾರೆ.