ಉಡುಪಿ: ಪರಿಸರ ಸಂರಕ್ಷಣೆಗಾಗಿ ಗೀತಾ ಫೌಂಡೇಶನ್ ಮತ್ತು ಉಡುಪಿ ಕಿನಾರಾ ಮೀನುಗಾರ ರೈತ ಉತ್ಪಾದಕ ಕಂಪನಿಯಿಂದ ಮೀನುಗಾರಿಕಾ ಜಂಟಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆಗಾಗಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್., ಸಿಬ್ಬಂದಿ ಹಾಗೂ ಉಡುಪಿ ಕಿನಾರಾ ಸಂಸ್ಥೆಯ ಸುದಿನ ಉಪಸ್ಥಿತರಿದ್ದರು.
ಇದನ್ನೂ ಓದಿ : ಕೋಕ್ತಿ ಕೆರೆ ರಕ್ತಮಯ; ಸಾರ್ವಜನಿಕರ ಆಕ್ರೋಶ
ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ಉಡುಪಿ ಕಿನಾರಾ ಮೀನುಗಾರ ರೈತ ಉತ್ಪಾದಕ ಕಂಪನಿ ರಚಿತವಾಗಿದೆ.