ಭಟ್ಕಳ (Bhatkal): ವ್ಯಕ್ತಿಯನ್ನು ಕೊಲೆಮಾಡಿ ಮೃತದೇಹವನ್ನು ವೆಂಕಟಾಪುರ ನದಿಯಲ್ಲಿ (Venkatapur River) ಎಸೆದು ಹೋಗಿದ್ದಾರೆ ಎಂದು ಭಟ್ಕಳ ತಹಶೀಲ್ದಾರ ಕಚೇರಿ ಕಂಟ್ರೋಲ್ ರೂಮ್ ಗೆ ಹುಸಿ ಕರೆ (fake call) ಮಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ವೆಂಕಟಾಪುರ ನದಿಯಲ್ಲಿ ಯಾರೋ ಕೊಲೆ ಮಾಡಿ ಮೃತ ದೇಹ ಎಸೆದು ಹೋಗಿದ್ದಾರೆ ಎಂದು ವ್ಯಕ್ತಿಯೋರ್ವ ಭಟ್ಕಳ ತಹಸೀಲ್ದಾರ ಕಚೇರಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕರೆ ಆಧರಿಸಿ ಸ್ಥಳಕ್ಕೆ ಹೋದ ತಹಸೀಲ್ದಾರ, ಗ್ರಾಮೀಣ ಠಾಣೆ ಪೊಲೀಸರು, ೧೧೨ ವಾಹನ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸುತ್ತಮುತ್ತ ಎಷ್ಟೇ ಹುಡುಕಾಡಿದರೂ ಯಾವುದೇ ಮೃತ ದೇಹ ಪತ್ತೆಯಾಗದ ಕಾರಣ ಇದೊಂದು ಹುಸಿ ಕರೆ ಎಂದು ಮರಳಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : tragic/ ಕಾಲುವೆಗೆ ಬಿದ್ದು ೨ ವರ್ಷದ ಬಾಲಕಿ ದುರ್ಮರಣ

ಶನಿವಾರದಂದು ಭಟ್ಕಳ ತಾಲೂಕಿನ ತಹಸೀಲ್ದಾರ ಕಚೇರಿಯ ಕಂಟ್ರೋಲ್ ರೂಮ್ ಗೆ ಅಸಾಮಿಯೋರ್ವ ವೆಂಕಟಾಪುರ ನದಿಯಲ್ಲಿ ಮರ್ಡರ್ ಮಾಡಿ ಮೃತ ದೇಹ ಎಸೆದು ಹೋಗಿದ್ದಾರೆ ಎಂದು ಕರೆ ಮಾಡಿ ಪುನಃ ಮಾಹಿತಿ ಕೇಳುವುದರೊಳಗಾಗಿ ಕರೆಯನ್ನು ಕಡಿತಗೊಳಿಸಿದ್ದ. ಬಳಿಕ ಕಾರ್ಯ ಪ್ರವೃತ್ತರಾದ ತಹಸೀಲ್ದಾರ ಹಾಗೂ ಗ್ರಾಮೀಣ ಠಾಣೆ ಪೊಲೀಸರು, ೧೧೨ ವಾಹನ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನದಿಯ ಸುತ್ತಮುತ್ತ ಎಷ್ಟೇ ಹುಡುಕಾಡಿದರೂ ಯಾವುದೇ ಮೃತ ದೇಹ ಪತ್ತೆಯಾಗಿಲ್ಲ. ನಂತರ ಇದೊಂದು ಹುಸಿ ಕರೆ ಎಂದು ಮರಳಿ ಬಂದಿದ್ದಾರೆ.

ಇದನ್ನೂ ಓದಿ : Elderly woman dies/ ಕಣ್ಣು ಕಾಣದೆ ನದಿಯಲ್ಲಿ ಬಿದ್ದು ವೃದ್ಧೆ ದುರ್ಮರಣ

ಏನೇ ಆಗಲಿ ನೆರೆ ಪ್ರವಾಹಕ್ಕೆ ತೆರೆದ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಕೊಲೆಯಾಗಿದೆ ಎಂದು ಹೇಳಿ ಒಂದೇ ಸಮನೆ ಎಲ್ಲರ ಧಿಕ್ಕು ತಪ್ಪಿಸಿದ ಆ ಖತರ್ನಾಕ್ ಅಸಾಮಿ ಯಾರು ಎನ್ನುವುದು ಕುತೂಹಲವಾಗಿದೆ. ಕರೆ ಮಾಡಿದ ಆ ವ್ಯಕ್ತಿ ಯಾರು ಎಂದು ನಾವು ಪತ್ತೆ ಹಚ್ಚುತ್ತೇವೆ ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : rain update / ಭಟ್ಕಳದಲ್ಲಿ ೨೬೦.೪ ಮಿಮೀ ಮಳೆ ದಾಖಲು