ಕಾರವಾರ : ಜಿಲ್ಲೆಯ ಎಲ್ಲ ವಿಕಲಚೇತನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲ ರೀತಿಯ ಸಾಧನ ಸಲಕರಣೆಗಳನ್ನು ಮತ್ತು ಪರಿಕರಗಳನ್ನು ವಿತರಿಸಲು ಸರ್ಕಾರ ಬದ್ಧವಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇದನ್ನೂ ಓದಿ : ಉಸ್ತುವಾರಿ ಸಚಿವರನ್ನು ಭೇಟಿಯಾದ ಶರಾಬ್ಬಿ ಹೋರಾಟ ಸಮಿತಿ

ಅವರು ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ವಿಕಲ ಚೇತನರಿಗೆ ಸಾಧನ ಸಲಕರಣೆ, ಪರಿಕರ, ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ : ಅಂಜುಮನ್ ಶಿಕ್ಷಣ ಸಂಸ್ಥೆಗೆ ಪದಾಧಿಕಾರಿಗಳ ಆಯ್ಕೆ  https://www.facebook.com/share/p/RC7NKkCznJQG9ko6/?mibextid=Nif5oz

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ನ ಅನಿರ್ಬಂಧಿತ ಅನುದಾನದಡಿ 109.27 ಲಕ್ಷ ಅನುದಾನದಲ್ಲಿ 80 ಯಂತ್ರಚಾಲಿತ ತ್ರಿ ಚಕ್ರವಾಹನ ಹಾಗೂ ಬ್ಯಾಟರಿ ಚಾಲಿತ ವಾಹನಗಳು ಸೇರಿದಂತೆ ವಿವಿಧ ಬಗೆಯ ಒಟ್ಟು 630 ಪರಿಕರಗಳನ್ನು ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಪರಿಕರಗಳ ಅಗತ್ಯವಿದ್ದರೆ ನೀಡಲಾಗುವುದು ಎಂದರು.

ವಿಕಲಚೇತನರಲ್ಲಿ ಎಲ್ಲರಂತೆ ಬದುಕುವ ಹಾಗೂ ವಿಶೇಷ ಸಾಧನೆಯ ಛಲ ಇದೆ. ಇದಕ್ಕೆ ಪೂರಕವಾಗಿ ಇಡೀ ಜಿಲ್ಲೆಯ ಎಲ್ಲ ವಿಕಲ ಚೇತನರಿಗೆ ಅವಶ್ಯಕತೆ ಅನುಗುಣವಾಗಿ, ಅವರ ಬೇಡಿಕೆಯಂತೆ ಸಾಧನ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ್ ಸೈಲ್ ಮಾತನಾಡಿ, ವಿಕಲಚೇತನರ ನೋವು ಅರಿಯಲು ಸಾಧ್ಯವಿಲ್ಲ. ಧೈರ್ಯವಾಗಿರಿ ಯಾವುದೇ ಸಂದರ್ಭದಲ್ಲಿ ಎದೆ ಗುಂದಬೇಡಿ. ನಿಮಗೆ ಅವಶ್ಯಕವಿರುವ ಎಲ್ಲಾ ಸಾಧನ ಸಲಕರಣೆಗಳನ್ನು ಒದಗಿಸಲು ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ನಿಧಿಯಿಂದ ಅನುದಾನ ನೀಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ತುಳಸಿದಾಸ್ ಎಂಬ ವಿಕಲಚೇತನ ನನ್ನು ಸಚಿವರು ವೇದಿಕೆಗೆ ಆಹ್ವಾನಿಸಿ ತಮ್ಮ ಪಕ್ಕದಲ್ಲಿ ಕುಳ್ಳರಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ. ಸಿ.ಇ.ಓ. ಈಶ್ವರ ಕುಮಾರ ಕಾಂದೂ ಮತ್ತಿತರರು ಉಪಸ್ಥಿತರಿದ್ದರು.