ಭಟ್ಕಳ ಡೈರಿ ವರದಿ
ಭಟ್ಕಳ: ಬೈಲೂರು ಹೈಸ್ಕೂಲ್ ಸಮೀಪ ಬೈಕ್ ಸವಾರನೊಬ್ಬ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ೬೦ ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ನವೆಂಬರ್ ೨೬ರಂದು ನಡೆದಿದೆ. ಬೈಲೂರಿನ ಗೋವೆಹಿತ್ಲು ರೊಡ್ಡನಮನೆಯ ವೆಂಕಟೇಶ ನಾಗಪ್ಪ ದೇವಡಿಗ (೬೦) ಗಾಯಗೊಂಡವರು.
ನವೆಂಬರ್ ೨೬ರಂದು ಬೆಳಿಗ್ಗೆ ಸುಮಾರು ೧೦ ಗಂಟೆಗೆ ವೆಂಕಟೇಶ ಅವರು ತೆಂಗಾರ ಕಡೆಯಿಂದ ಬೈಲೂರು ಕ್ರಾಸ್ ಕಡೆಗೆ ಸೈಕಲ್ನಲ್ಲಿ ತೆರಳುತ್ತಿದ್ದರು. ಈ ವೇಳೆ ತೆಂಗಾರ ಕಡೆಯಿಂದ ಬೈಲೂರು ಕ್ರಾಸ್ ಕಡೆಗೆ ಬರುತ್ತಿದ್ದ ಕೆಎ-೪೭-ಇಎ-೧೩೧೫ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ತಿಮ್ಮಪ್ಪ ಧರ್ಮಾ ನಾಯ್ಕ (೩೨) ಎಂಬವರು ಬೈಲೂರು ಹೈಸ್ಕೂಲ್ ಬಳಿ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದ ವೆಂಕಟೇಶ ಅವರ ಎಡಗೈ, ಮುಖ ಹಾಗೂ ಕಾಲುಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಗಾಯಾಳುವಿನ ಸಹೋದರ ಗಣಪತಿ ನಾಗಪ್ಪ ದೇವಡಿಗ (೪೬) ಅವರು ನವೆಂಬರ್ ೨೭ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಸವಾರನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಭಟ್ಕಳದಲ್ಲಿ ಆಹಾರ ಸುರಕ್ಷತಾ ಅಧಿಕಾರಿಯೇ ಇಲ್ಲ! ಸಾರ್ವಜನಿಕರ ಆರೋಗ್ಯದ ಬಗ್ಗೆ ಕಳವಳ
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನಿನ ಕೊಳಚೆ ನೀರು ಚೆಲ್ಲಾಟ: ಪ್ರಶ್ನಿಸಿದ ಮಾಜಿ ಸೈನಿಕನಿಗೆ ಬೆದರಿಕೆ ಆರೋಪ



