ಭಟ್ಕಳ: Breaking News/ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳ ತಾಲೂಕು ಪಂಚಾಯತ ಸಮೀಪ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮೃತನ ಪತ್ನಿ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತನು ಮುರುಡೇಶ್ವರ ಬಸ್ತಿಯ ದೇವಿಕಾನ್ ನಿವಾಸಿಯಾಗಿದ್ದು, ಇವರು ಮೂಲತಃ ಕರಿಕಲ್ ಗ್ರಾಮದವರು ಎಂದು ಹೇಳಲಾಗಿದೆ. ಪತಿ-ಪತ್ನಿ ಇಬ್ಬರೂ ತಮ್ಮ ನಿವಾಸದಿಂದ ಭಟ್ಕಳದ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಟ್ಯಾಂಕರ್ ಹಾಗೂ ಬೈಕ್ ಸಂಶುದ್ದೀನ್ ವೃತ್ತದ ಕಡೆಯಿಂದ ಬರುತ್ತಿದ್ದ ವೇಳೆ ಬೈಕ್ ಬೈಕ್ ಸವಾರನ ತಲೆಯ ಮೇಲೆ ಟ್ಯಾಂಕರ್ ಮುಂಭಾಗದ ಚಕ್ರ ಹರಿದಿದೆ. ಹೆಲ್ಮೆಟ್ ಧರಿಸಿದ್ದರೂ ಕೂಡ ಚಕ್ರಕ್ಕೆ ತಲೆ ಛಿದ್ರವಾಗಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಮೃತನ ಪತ್ನಿ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ದೇಹದ ಮುಂದೆ ಪತ್ನಿಯ ಆಕ್ರಂದರನ ಮುಗಿಲು ಮುಟ್ಟಿದ್ದು ಮನಕಲುಕುವಂತಿತ್ತು. ಭಟ್ಕಳ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
(Breaking News)
ಇದನ್ನೂ ಓದಿ: Threat / ಖಾಸಗಿ ಫೋಟೋ, ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ



