ಬೆಂಗಳೂರು : ಕೊನೆಗೂ ಜೆಡಿಎಸ್ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಮ್ಮ ಪಕ್ಷದ ಮೂರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ : ಕೋಲಾರ ಇನ್ನೂ‌ ನಿಗೂಢ

ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಹಾಸನದಲ್ಲಿ ಅಭ್ಯರ್ಥಿ ಘೋಷಣೆ ಮುನ್ನವೇ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ಶುರು ಮಾಡಿಕೊಂಡಿದ್ದರು. ಅವರಿಗೇ ಟಿಕೆಟ್ ಅಂತಿಮಗೊಂಡಿದೆ.

ಈ ರೀಲ್ಸ್ ನೋಡಿ : ಈಶ್ವರಪ್ಪಗೆ ಬಿ ವೈ ರಾಘವೇಂದ್ರ ಸವಾಲು

ಮಂಡ್ಯ ಕ್ಷೇತ್ರಕ್ಕೆ ಆರಂಭದಲ್ಲಿ ಸಿ.ಎಸ್.ಪುಟ್ಟರಾಜು ಹೆಸರು ಕೇಳಿಬಂದಿತ್ತು. ನಂತರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿತ್ತು. ಅಂತಿಮವಾಗಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನಿರ್ಧರಿಸಲಾಗಿದೆ.

ಕೋಲಾರದಲ್ಲಿ ಮುನಿಸ್ವಾಮಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಹಾಲಿ ಸಂಸದ ಬಿಜೆಪಿಯ ಮುನಿಸ್ವಾಮಿ ಮೈತ್ರಿಯಿಂದಾಗಿ ಟಿಕೆಟ್ ವಂಚಿತರಾಗಿದ್ದಾರೆ.

ಅಂತೂ ಜೆಡಿಎಸ್ ಪಟ್ಟಿ ಅಂತಿಮಗೊಂಡಿದೆ. ಎಲ್ಲ ೨೮ ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಘೋಷಣೆಯಾದಂತಾಗಿದೆ. ಕಾಂಗ್ರೆಸ್ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಇನ್ನೂ ಘೋಷಿಸಬೇಕಿದೆ.