ಭಟ್ಕಳ: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ತಾಲೂಕು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ವೇದಿಕೆಯ ಸದಸ್ಯರು ಚಿತ್ರಾಪುರದ ಹಿರಿಯ ರಂಗಭೂಮಿ ಕಲಾವಿದ ಎ.ಬಿ. ಚಿತ್ರಾಪುರ ಅವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿದರು.

ಇದನ್ನೂ ಓದಿ : ಎಸ್ಐ ಅಣ್ಣಪ್ಪ ಮೊಗೇರ ನಿವೃತ್ತಿ, ಉಡುಪಿಯಲ್ಲಿ ಬೀಳ್ಕೊಡುಗೆ

ಕಾರ್ಯಕ್ರಮದಲ್ಲಿ ತಾಲೂಕು ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷರೂ ಆಗಿರುವ ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ, ಪ್ರಮುಖರಾದ ಎಸ್.ಎನ್.ದೇವಡಿಗ, ವೆಂಕಟೇಶ ನಾಯ್ಕ ತಲಗೋಡು, ದೇವೇಂದ್ರ ನಾಯ್ಕ ಕಂಡೆಕೊಡ್ಲು, ತಾಲೂಕು ರಂಗಭೂಮಿಯ ಕಲಾವಿದರು, ಊರಿನ ಗಣ್ಯರು ಹಾಗೂ ಸನ್ಮಾನಿತ ರಂಗಭೂಮಿ ಕಲಾವಿದ ಎ.ಬಿ. ಚಿತ್ರಾಪುರ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ನೈಜ ಮತ್ತು ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶಿಕ್ಷಕ ವೆಂಕಟೇಶ ನಾಯ್ಕ ಹುರುಳಿಸಾಲ್ ಸ್ವಾಗತಿಸಿದರು. ಕಾರ್ಯದರ್ಶಿ ದೇವ ನಾಯ್ಕ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.