ಭಟ್ಕಳ : ಈ ಹಿಂದೆಂದೂ ಕಂಡು ಕೇಳರಿಯದ ಬಿಸಿಲಿನಿಂದಾಗಿ ಭಟ್ಕಳದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಇದರಿಂದಾಗಿ ಭಟ್ಕಳ ನಗರದ ಸಾರ್ವಜನಿಕರಿಗೆ ನೀರು ಪೂರೈಸುವಲ್ಲಿ ಭಟ್ಕಳ ಪುರಸಭೆ ತತ್ತರಿಸುತ್ತಿದೆ. ಇಂಥಾ ಪರಿಸ್ಥಿತಿಯಲ್ಲಿಯೂ ಭಟ್ಕಳ ಪುರಸಭೆಯ ತೀವ್ರ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಸಾವಿರಾರು ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ.
ಇದನ್ನೂ ಓದಿ : ತುರ್ತು ನೈರ್ಮಲ್ಯ ಕ್ರಮಕ್ಕೆ ತಂಝೀಮ್ ಮನವಿ
ಭಟ್ಕಳ ಸಾಗರ ರಸ್ತೆಯಲ್ಲಿರುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಈಗಾಗಲೇ ೧೫ ದಿನಗಳಾಗಿವೆ.
ಇದರಿಂದಾಗಿ ಪ್ರತಿನಿತ್ಯ ಸಾವಿರಾರು ಕ್ಯೂಸೆಕ್ಸ್ ಕುಡಿಯುವ ನೀರು ಪೋಲಾಗುತ್ತಿದೆ. ಈ ಬಗ್ಗೆ ಅರಿವಿದ್ದರೂ ಭಟ್ಕಳ ಪುರಸಭೆಯ ಅಧಿಕಾರಿಗಳು ದಿವ್ಯ ಮೌನಕ್ಕೆ ಜಾರಿದ್ದಾರೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಈ ಕೂಡಲೇ ಗಮನಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.