ಬೆಂಗಳೂರು : ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ(67) ಅವರು ಇಂದು ನಸುಕಿನಲ್ಲಿ ಬೆಂಗಳೂರಿನ ಮಗನ ಮನೆಯಲ್ಲಿ ವಿಧಿವಶರಾಗಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ ; ೧೨ ಜನರ ವಿರುದ್ಧ ಪ್ರಕರಣ ದಾಖಲು

ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷ ಸೇವೆ ಸಲ್ಲಿಸಿದ್ದರು. ಪೆರ್ಡೂರು ಮೇಳದಲ್ಲಿ 28 ವರ್ಷ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಆರಂಭಿಸಿದ್ದರು. ಹಿರೇ ಮಹಾಲಿಂಗೇಶ್ವರ ಮೇಳ ಮತ್ತು ಶಿರಸಿ ಮೇಳದಲ್ಲೂ ಭಾಗವತರಾಗಿ ನಂತರ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಉತ್ತುಂಗಕ್ಕೇರಿದ್ದರು. ಸಂಗೀತ ಅಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಅದಕ್ಕೂ ಮೊದಲು ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪ್ರಾಚಾರ್ಯ ನಾರಣಪ್ಪ ಉಪ್ಪೂರು ಅವರ ಮೂಲಕ ರಂಗಸ್ಥಳದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಪೆರ್ಡೂರು ಮೇಳ ಬಿಟ್ಟು ಹತ್ತು ವರ್ಷದ ನಂತರ ಮತ್ತೆ ಅದೇ ಮೇಳಕ್ಕೆ ಸೇರಿ ಒಂದು ವರ್ಷ ತಿರುಗಾಟ ಮಾಡಿದ್ದರು. ತಮ್ಮ ಅಪ್ರತಿಮ ಕಂಠದ ಮೂಲಕ ಹೆಸರಾಂತ ಭಾಗವತರಾಗಿದ್ದ ಅವರು ಯಕ್ಷಗಾನ ಪ್ರೇಮಿಗಳ ಮನ ಗೆದ್ದಿದ್ದರು.