ಕುಮಟಾ: ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಇತ್ತೀಚೆಗೆ ನಿಧನರಾದ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ನುಡಿನಮನ ಸಲ್ಲಿಸಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ದಿ. ನಾರ್ಣಪ್ಪ ಉಪ್ಪಾರರ ಗರಡಿಯಲ್ಲಿ ಪಳಗಿದ ಯಕ್ಷಗಾನ ಲೋಕದ ಗಾನ ಮಾಂತ್ರಿಕ ಧಾರೇಶ್ವರರು ಹೊಸ ತಲೆಮಾರಿನ ಯಕ್ಷಪ್ರೇಮಿಗಳಿಗೆ ಯಕ್ಷಸಂಗೀತದ ಹೊಸ ದಿಕ್ಕನ್ನು ಪರಿಚಯಿಸಿದ್ದರು ಎಂದು ಹಿರಿಯ ಯಕ್ಷಗಾನ ಕಲಾವಿದ ಮೋಹನ ನಾಯ್ಕ ಕೂಜಳ್ಳಿ ಅವರು ಸುಬ್ರಹ್ಮಣ್ಯ ಧಾರೇಶ್ವರರಿಗೆ ಸಲ್ಲಿಸಿದ ನುಡಿನಮನದಲ್ಲಿ ತಿಳಿಸಿದರು.

ಯಕ್ಷಗಾನದ ಮಡಿವಂತಿಕೆಯನ್ನು ಕೆಡಿಸಿದವರೆಂದು ಧಾರೇಶ್ವರರು ಟೀಕಾಪ್ರಹಾರ ಎದುರಿಸಿದರೂ, ವಿಭಿನ್ನ ರಾಗಮಾಲಿಕೆಯಲ್ಲಿ ಕನ್ನಡ ಸಾಹಿತ್ಯ ಲೋಕದ ಕವಿಗಳ ಹಾಡುಗಳನ್ನು ಪ್ರಸ್ತುತಪಡಿಸಿ ನೂರಾರು ಕ್ಯಾಸೆಟ್ಟುಗಳನ್ನು ನೀಡುತ್ತಿದ್ದುದನ್ನು ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ನೆನಪಿಸಿಕೊಂಡರು.

ಇದನ್ಮೂ ಓದಿ : ಸುಬ್ರಹ್ಮಣ್ಯ ಧಾರೇಶ್ವರ ಯಕ್ಷರಂಗದ ಅಪ್ರತಿಮ ಭಾಗವತ – ವಿ.ಕೆ.ಭಟ್

ಕಸಾಪ ಕುಮಟಾ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಮಾಜಿ ಅಧ್ಯಕ್ಷ ಎನ್. ಆರ್. ಗಜು, ಗೌರವ ಕಾರ್ಯದರ್ಶಿ ಪ್ರಮೋದ ನಾಯ್ಕ, ಅರವಿಂದ ನಾಯ್ಕ, ಮಂಜುನಾಥ ಮೊದಲಾದವರು ಪುಷ್ಪನಮನ ಸಲ್ಲಿಸಿದರು.