ಭಟ್ಕಳ: ಭಟ್ಕಳ ತಾಲೂಕಿನ ಕೋಕ್ತಿ ದೇವಸ್ಥಾನ ಸಮೀಪ ಇರುವ ಕೆರೆಗೆ ಪ್ರಾಣಿ ವಧೆ ಮಾಡಿರುವ ನೀರು ಹರಿದು ಬರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಫೇಸ್‌ಬುಕ್‌ ನಲ್ಲಿ ವಿಡಿಯೋ ನೋಡಿ : ಕೋಕ್ತಿ ಕೆರೆಗೆ ಸೇರುತ್ತಿದೆ ರಕ್ತಮಿಶ್ರಿತ ಒಳಚರಂಡಿ ನೀರು

ಭಟ್ಕಳ ತಾಲೂಕಿನಲ್ಲಿರುವ ಅತಿ ದೊಡ್ಡ ಕೆರೆ ಇದಾಗಿದೆ. ತಾಲೂಕಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಚರಂಡಿ ಸಂಪರ್ಕದ ಮೂಲಕ ಮಳೆ ನೀರಿನೊಂದಿಗೆ ಪ್ರಾಣಿವಧೆ ಮಾಡಿದ ರಕ್ತ ಕೆರೆಗೆ ಹರಿದು ಬರುತ್ತಿದೆ. ಇದರಿಂದಾಗಿ ಐತಿಹಾಸಿಕ ಪ್ರಸಿದ್ಧ ಕೆರೆ ಮಲೀನವಾಗುತ್ತಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ನೋಡಿ : ಕೋಕ್ತಿ ಕೆರೆಗೆ ಸೇರುತ್ತಿದೆ ರಕ್ತಮಿಶ್ರಿತ ಒಳಚರಂಡಿ ನೀರು

ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಸದಸ್ಯರು ಜಮಾವಣೆಗೊಂಡಿದ್ದರು. ರಕ್ತವೂ ನೀರಿನಲ್ಲಿ ಹರಿಯುತ್ತಿರುವದನ್ನು ಕಂಡು ಸಾರ್ವಜನಿಕರು ಕೋಕ್ತಿ ಕೆರೆ ನೀರು ಮಲಿನಗೊಳಿಸಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಡಿವೈಎಸ್‌ಪಿ ಮಹೇಶ ಎಂ.ಕೆ., ನಗರ ಠಾಣೆ ಪಿಎಸ್‌ಐ, ಎಎಸ್‌ಐಸೇರಿ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಬಿತ್ತನೆಗೆ ಸಿದ್ಧರಾದ ರೈತರು; ಕಾಡುತ್ತಿದೆ ಬೀಜದ ಕೊರತೆ

ಅವೈಜ್ಞಾನಿಕ ಕಾಮಗಾರಿ :
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಮೇಸ್ತ ‘ಭಟ್ಕಳ ಡೈರಿ’ಯೊಂದಿಗೆ ಮಾತನಾಡಿ, ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿಯಿಂದಾಗಿ ಈ ರೀತಿ ಘಟನೆ ಸಂಭವಿಸಿದೆ. ಕರ್ನಾಟಕ ಜಲ ಮಂಡಳಿಯವರು ಕಳೆದ ಒಂದು ವರ್ಷದಿಂದ ಭಟ್ಕಳ ತಾಲೂಕಿನಲ್ಲಿ ಒಳ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ಮುಗಿಸಿ ಇದುವರೆಗೆ ನಮಗೆ ಹಸ್ತಾಂತರ ಮಾಡಿಲ್ಲ. ಕಳೆದ ೫ ವರ್ಷದ ಹಿಂದೆ ಕಾಮಗಾರಿ ಮಾಡುವಾಗ ಕೇವಲ ಚರಂಡಿ ಮಾತ್ರ ನಿರ್ಮಾಣ ಮಾಡುತ್ತಿದ್ದರು. ಆದರೆ ಈಗ ನಡೆಸುತ್ತಿರುವ ಕಾಮಗಾರಿಯಲ್ಲಿ ರಿಸೀವಿಂಗ್ ಚರಂಡಿ ಕೂಡ ನಿರ್ಮಾಣ ಮಾಡಿದ್ದಾರೆ. ಅದರಿಂದಾಗಿ ಸ್ಥಳೀಯ ಜನರು ಅನಧಿಕೃತವಾಗಿ ರಿಸೀವಿಂಗ್ ಚರಂಡಿಗೆ ಸಂಪರ್ಕ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಈಗ ಎಲ್ಲವನ್ನೂ ಪುರಸಭೆ ಮೇಲೆ ಹಾಕುತ್ತಿದ್ದಾರೆ ಎಂದರು.

ಇದನ್ನೂ ಓದಿ : ಪರಿಸರ ಮಾಹಿತಿ ಕಾರ್ಯಕ್ರಮ ಸಂಪನ್ನ

ವಾಸ್ತವಿಕ ಅಂಶ ಎಲ್ಲರಿಗೂ ತಿಳಿಯಬೇಕು. ಇದುವರೆಗೆ ನಮಗೆ ಕರ್ನಾಟಕ ಜಲ ಮಂಡಳಿಯವರು ಕಾಮಗಾರಿ ಮುಗಿಸಿ ನಮಗೆ ಹಸ್ತಾಂತರ ಮಾಡಿಲ್ಲ. ಹಿಂದೆ ಕಾಮಗಾರಿ ಮಾಡಿದ ವೇಳೆ ಕೇವಲ ಚರಂಡಿ ನಿರ್ಮಿಸಿ ನಮಗೆ ಹಸ್ತಾಂತರ ಮಾಡಿದ್ದರು. ಬಳಿಕ ನಾವು ಅಧಿಕೃತವಾಗಿ ಚರಂಡಿ ಸಂಪರ್ಕ ನೀಡಿ ಆವರಿಂದ ಹಣ ಸಂಗ್ರಹ ಮಾಡುತ್ತಿದ್ದೆವು.
ವೆಂಕಟೇಶ ಮೇಸ್ತ, ಪುರಸಭೆ ಮುಖ್ಯಾಧಿಕಾರಿ, ಭಟ್ಕಳ

ಇದನ್ನೂ ಓದಿ : ಜೂನ್‌ ೧೮ರಂದು ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ಧಾರಣೆ

ಸದ್ಯ ಕೋಕ್ತಿ ಭಾಗದಲ್ಲೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕೋಕ್ತಿ ಮಧ್ಯಭಾಗದಿಂದ ಚರಂಡಿ ಹಾದು ಹೋಗುತ್ತದೆ. ಅರ್ಧ ಭಾಗ ಕಾಮಗಾರಿ ಆಗಿರುವುದರಿಂದ ಮುಂದೆ ಕಾಮಗಾರಿ ಅಪೂರ್ಣಗೊಂಡಿದೆ. ಇದರಿಂದಾಗಿ ಅನಧಿಕೃತವಾಗಿ ರಿಸೀವಿಂಗ್ ಚರಂಡಿಗೆ ಸಂಪರ್ಕ ಮಾಡಿಕೊಂಡವರ ಮನೆಯಿಂದ ಬರುವ ನೀರು ಮುಂದೆ ಹೋಗುತ್ತಿಲ್ಲ. ಅದು ನೇರ ಆಗದೆ ಕೆರೆಗೆ ಹೋಗುತ್ತಿದೆ. ಮಳೆಗಾಲ ಆಗಿರುವುದರಿಂದ ಕಾಮಗಾರಿ ನಡೆಸುತ್ತಿರುವವರು ಕೆರೆಗೆ ಅಳವಡಿಸಿದ ಪೈಪ್ ಗೆ ಕ್ಯಾಪ್ ಹಾಕದೆ ಇರುವುದು ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ಕೆರೆಗೆ ಈ ರೀತಿ ನೀರು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದ ಬಳಿಕ ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ಪೈಪ್ ಗೆ ಕ್ಯಾಪ್ ಅಳವಡಿಸಿದ್ದೇವೆ. ಅಲ್ಲಿನ ಸಮಸ್ಯೆ ಬಗೆ ಹರಿಸಿದ್ದೇವೆ ಎಂದು ವೆಂಕಟೇಶ ಮೇಸ್ತ ಹೇಳಿದ್ದಾರೆ.

ಇದನ್ನೂ ಓದಿ : ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ; ಓರ್ವ ವಶಕ್ಕೆ

ಕಾನೂನು ಕ್ರಮಕ್ಕೆ ತೊಡಕು :
ಕರ್ನಾಟಕ ಜಲಮಂಡಳಿಯವರು ನಮಗೆ ಹಸ್ತಾಂತರ ಮಾಡಿಲ್ಲ. ಹೀಗಾಗಿ ಅನಧಿಕೃತವಾಗಿ ರಿಸೀವಿಂಗ್ ಚರಂಡಿಗೆ ಸಂಪರ್ಕ ಪಡೆದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಮೇಸ್ತ ಹೇಳಿದರು.