ಭಟ್ಕಳ: ಭೂಮಿಗಾಗಿ ಗಲಾಟೆ ನಡೆಯುವ ಇಂದಿನ ಕಾಲದಲ್ಲಿ ಇಲ್ಲೊಬ್ಬರು ಯಾವುದೇ ಫಲಾಪೇಕ್ಷೆಯಿಲ್ಲದೇ ಸರಕಾರಿ ಶಾಲೆಯ ಉಳಿವಿಗಾಗಿ ಭೂಮಿ ದಾನಮಾಡಿದ್ದಾರೆ. ಭೂ ಶಾಲೆಯ ನಿಗದಿತ ೪.೪ ಗುಂಟೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಬೆಳಕೆ ಭಾಗದ ಉದ್ಯಮಿ ಮಾದೇವ ನಾಯ್ಕ ದಂಪತಿ ಜಾಗದ ಹೆಸರಿನ ದಾಖಲಾತಿಯನ್ನು ಶಾಲಾ ಮುಖ್ಯಾಧ್ಯಾಪಕರಿಗೆ ವಿತರಿಸಿ ಎಲ್ಲರ ಪ್ರಶಂಸೆಗೆ ಕಾರಣವಾಗಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಜಾಗದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಅಹಿತಕರ ಘಟನೆ ನಡೆಯುತ್ತಿವೆ. ಆದರೆ ಭಟ್ಕಳ ತಾಲೂಕಿನ ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರಕಾರಿ ಶಾಲೆಯ ಉಳಿವಿಗಾಗಿ ಉದ್ಯಮಿ ಮಾದೇವ ನಾಯ್ಕ ಮುಂದೆ ಬಂದಿದ್ದಾರೆ. ಶಾಲೆಗೊಂದು ಸರಿಯಾದ ಜಾಗ ಇರಬೇಕೆನ್ನುವ ಉದ್ದೇಶ ಇಟ್ಟು ಶಾಲೆ ಸಹಿತ ಇದ್ದ ಭೂಮಿಯನ್ನು ಬೆಳಕೆಯ ಕಲಬಂಡಿಯ ಮಾದೇವ ನಾಯ್ಕ ದಂಪತಿ ದಾನ ಮಾಡಿದ್ದಾರೆ. ತಮ್ಮ ಖರೀದಿಯ ಜಾಗದಲ್ಲಿ ಇದ್ದ ಶಾಲೆಯ ಭೂಮಿಯನ್ನು ಶಾಲೆಯ ಹೆಸರಿಗೆ ಪಹಣಿ ಮಾಡಿದ್ದಾರೆ. ಮೊದಲಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇವರು ಈ ಭಾಗದ ಮಕ್ಕಳ ಭವಿಷ್ಯಕ್ಕೆ ಹಾಗೂ ಶಾಲೆಗೊಂದು ಅನೂಕೂಲ ಮಾಡಿಕೊಟ್ಟಂತಾಗಿದೆ.

ಇದನ್ಮೂ ಓದಿ : ಕಾರಿಗೆ ಹಗ್ಗ ಕಟ್ಟಿ ಎಳೆದೊಯ್ದು ಪ್ರತಿಭಟನೆ ನಡೆಸಿದ ಬಿಜೆಪಿ

ತಾಲೂಕಿನ ಬೆಳಕೆ ಪಂಚಾಯತ ವ್ಯಾಪ್ತಿಯ ನೂಜ ಮಜಿರೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆರ್ಬುಡ್ಕಿ ಶಾಲೆಯು 1992ರಲ್ಲಿ ಆರಂಭಗೊಂಡಿದೆ. ಅಲ್ಲಿಂದ ಕಳೆದ ಒಂದು ವರ್ಷದಿಂದಿಚೆಗೆ ಊರಿನ ಸ್ಥಳಿಯರೋರ್ವರ ಹೆಸರಿನಲ್ಲಿ ಶಾಲೆ ಸಹಿತ ಖಾಲಿ ಜಾಗವು ಇತ್ತು. ಅಲ್ಲಿಂದ ಸಾಕಷ್ಟು ಬಾರಿ ಖಾಸಗಿ ವ್ಯಕ್ತಿಗೆ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಶಾಲೆಯ ಜಾಗವನ್ನು ಪ್ರತ್ಯೇಕವಾಗಿ ಪಹಣಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಆದರೆ ಕೆಲವೊಂದು ಕಾರಣದಿಂದಾಗಿ ಶಾಲೆಯ ಭೂಮಿಗೆ ಪ್ರತ್ಯೇಕ ಪಹಣಿ ಮಾಡಲು ಸಾಧ್ಯವಾಗಿಲ್ಲ.
ಈ ಶಾಲೆಯಲ್ಲಿ ಸದ್ಯಕ್ಕೆ ೧ನೇ ತರಗತಿಯಿಂದ ೫ನೇ ತರಗತಿಯ ತನಕ ೨೫ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಟ್ಟ ಕಾಡಿನಲ್ಲಿ ಶಾಲೆ ಇದೆ. ಹೆರ್ಬುಡ್ಕಿಯ ಶಾಲೆಯ ಜಾಗವು ಖಾಸಗಿ ವ್ಯಕ್ತಿಯ ಹೆಸರಿನಲ್ಲಿತ್ತು. ಶಾಲೆಯ ಪಕ್ಕದ ಮಾಲ್ಕಿ ಭೂಮಿಯನ್ನು ಕಲಬಂಡಿ ಮಾದೇವ ನಾಯ್ಕ ದಂಪತಿ ಖರೀದಿ ಮಾಡಿದ್ದರು. ಈ ವೇಳೆ ಇವರ ಖರೀದಿ ಜಾಗದಲ್ಲಿಯೇ ಶಾಲೆಯು ಒಳಗೊಂಡಿರುವುದು ಮಾದೇವ ನಾಯ್ಕ ಅವರ ಗಮನಕ್ಕೆ ಬಂತು. ಅದಾದ ಬಳಿಕ ಖುದ್ದು ಮಾದೇವ ನಾಯ್ಕ ಅವರೇ ಶಾಲೆ ಜಾಗದ ಪಹಣಿ ಪತ್ರ ಮಾಡಿಸಿಕೊಟ್ಟು ಮುಖ್ಯ ಶಿಕ್ಷಕಿಗೆ ದಾಖಲೆ ಪತ್ರವನ್ನು ಶಾಲೆಗೆ ತೆರಳಿ ಹಸ್ತಾಂತರಿಸಿದರು. ಮಾದೇವ ನಾಯ್ಕ ಅವರ ಶಿಕ್ಷಣ ಪ್ರೇಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಅಫ್ರೀನ್ ಶೇಖ, ಸಹ ಶಿಕ್ಷಕಿ ಸವಿತಾ ಎಚ್. ನಾಯ್ಕ, ಎಸ್.ಡಿ.ಎಮ್.ಸಿ ಹಾಗೂ ಊರ ನಾಗರಿಕರು ಧನ್ಯವಾದ ತಿಳಿಸಿದ್ದಾರೆ.

 

ಈ ಬಗ್ಗೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಅಫ್ರೀನ್ ಶೇಕ್-
ಶಿಕ್ಷಣದ ಬಗ್ಗೆ ಮಾದೇವ ನಾಯ್ಕ ಹಾಗೂ ದಂಪತಿಗಳು ಹೆಚ್ಚಿನ ಪ್ರಾಮುಖ್ಯತೆ ಇಟ್ಟುಕೊಂಡಿದ್ದಾರೆ. ನಾನು ಈ ಶಾಲೆಗೆ ಬಂದು 7 ವರ್ಷ ಆಗಿದ್ದು 32 ವರ್ಷದ ಹಳೆಯ ಶಾಲೆಗೆ ಇವರು ನಿಗದಿತ ಜಾಗಕ್ಕೆ ಪಹಣಿ ಪತ್ರ ಮಾಡಿಕೊಟ್ಟಿದ್ದಾರೆ. ಇದರಿಂದ ಇಷ್ಟು ದಿನ ಶಾಲೆಯ ಅಭಿವೃದ್ಧಿಗೆ ಪಹಣಿ ಪತ್ರ ಇಲ್ಲದಿರುವುದು ಕುಂಠಿತವಾಗುತ್ತಿತ್ತು. ಆದರೆ ಈಗ ಪಹಣಿ ಪತ್ರದಿಂದ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಅನೂಕೂಲವಾದಂತಾಗಿದೆ. ಇವರು 10 ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದು ಕಲಿಕೆಯಲ್ಲಿ ಆಸಕ್ತಿ ಇದ್ದು ಮನೆಯ ಬಡತನದಿಂದ ವಿದ್ಯೆ ಮುಂದುವರೆಸುವುದು ಅವರಿಗೆ ಕಷ್ಟವಾಗಿತ್ತು. ಇದು ಅವರಿಗೆ ಈ ಶಾಲೆಗೊಂದು ಪ್ರತ್ಯೇಕ ಪಹಣಿ ಪತ್ರ ಮಾಡಿಕೊಟ್ಟರು. ಸಮಾಜದಲ್ಲಿ ಇವರು ಉದ್ಯಮಿಯಾಗಿದ್ದು ಈ ಕೆಲಸದಿಂದ ಅವರ ಜೀವನ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇನೆ.