ಹೊನ್ನಾವರ: ಇಲ್ಲಿನ ನಾಟ್ಯಶ್ರೀ ಯಕ್ಷ ಕಲಾ ಪ್ರತಿಷ್ಠಾನ ಹಮ್ಮಿಕೊಂಡ ಒಂಭತ್ತು ದಿನಗಳ ಶ್ರೀರಾಮ ಚರಿತೆಯ ಎಂಟನೇ ದಿನದ ಪ್ರಸಂಗ ತಾಲೂಕಿನ ಮೇಲಿನ ಖರ್ವಾದಲ್ಲಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೇಲಿನ ಖರ್ವಾದಲ್ಲಿ ನಡೆದ ಭಾವ ಭಾಷಾ ವಿಲಾಸದ ಎಂಟನೆಯ ದಿನದ ಕಾರ್ಯಕ್ರಮದಲ್ಲಿ ತಮಸಾತೀರದ ಆಖ್ಯಾನ ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ಅವರ ಕಂಠಸಿರಿಯಲ್ಲಿ ಹೊರ ಹೊಮ್ಮಿತು. ಒಂಭತ್ತೂ ದಿನ ರಾಮನಾಗಿ ಕಾಣಿಕೊಳ್ಳುತ್ತಿರುವ ಸೆಲ್ಕೋ ಸಿಇಓ ಮೋಹನ ಭಾಸ್ಕರ ಹೆಗಡೆ ಅವರ ಶ್ರೀರಾಮನ ಪಾತ್ರ, ವಾಲ್ಮೀಕಿಯಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರ ಸಂವಾದ ಪ್ರೇಕ್ಷಕರ ಸೆಳೆಯಿತು. ಸೀತೆಯಾಗಿ ಪ್ರಸಾದ ಭಟ್ಕಳ, ಲಕ್ಷ್ಮಣನಾಗಿ ಚಂದ್ರಕಲಾ ಭಟ್ಟ ಯಲ್ಲಾಪುರ, ಭದ್ರನಾಗಿ ಶ್ರೀಧರ ಕಾಸರಕೋಡ ಆಖ್ಯಾನ ಕಟ್ಟಿಕೊಟ್ಟರು. ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ, ಚಂಡೆಯಲ್ಲಿ ಗಜಾನನ ಸಾಂತೂರು ಗಮನ ಸೆಳೆದರು.
ಇದನ್ನೂ ಓದಿ : ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ
ಇದೇ ವೇಳೆ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಎಸ್
ಜಿ.ಭಟ್ಟ ಕಬ್ಬಿನಗದ್ದೆ, ನಾಟ್ಯಶ್ರೀ ಸಂಸ್ಥೆಯು ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಷಷ್ಟ್ಯಬ್ಧಿ ಸಮಾರಂಭ ಹಿನ್ನಲೆಯಲ್ಲಿ ಜನ್ಮ ಪಡೆದಿದೆ. ಈಗ ಇದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇದೇ ಕಾರಣಕ್ಕೆ ನವ ತಾಳಮದ್ದಲೆ ಸರಣಿ ಕೂಡ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪದ್ಮಶ್ರೀ ಚಿಟ್ಟಾಣಿ ಅವರ ಧರ್ಮಪತ್ನಿ ಸುಶೀಲಾ ಹೆಗಡೆ ಅವರನ್ನು ಆತ್ಮೀಯವಾಗಿ ಗೌರವಿಸಲಾಗುತ್ತಿದೆ ಎಂದರು. ಇದೇ ವೇಳೆ ಹಿರಿಯ ಕಲಾವಿದ ಸುಬ್ರಹ್ಮಣ್ಯ ಯಲಗುಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಲೋಕ ಅದಾಲತ್ ಯಶಸ್ವಿ; ೧೧೧೯ ಪ್ರಕರಣ ಇತ್ಯರ್ಥ
ವೇದಿಕೆಯಲ್ಲಿ ಡಾ.ಜಿ.ಜಿ.ಸಭಾಹಿತ, ಡಾ.ಕೆ.ಎಸ್ ಭಟ್ಟ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ಮೋಹನ ಭಾಸ್ಕರ ಹೆಗಡೆ, ಪ್ರಸನ್ನ ಹೆಗಡೆ, ಜಿ.ಆರ್. ಹೆಗಡೆ, ಪಿ.ಜಿ. ಹೆಗಡೆ, ಎಸ್.ಜಿ. ಭಟ್ಟ ವೇದಿಕೆಯಲ್ಲಿದ್ದರು.