ಭಟ್ಕಳ : ಪಟ್ಟಣದಲ್ಲಿ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯಿಂದ ನಿರ್ಮಿಸಿದ ಒಳಚರಂಡಿ ಅವಾಂತರ(drainage problem) ಸೃಷ್ಟಿಸಿದೆ. ಚೇಂಬರಗಳಿಂದ ನೀರು ಸೋರಿಕೆಯಾಗಿ ಬಾವಿ ನೀರು ಕಲುಷಿತಗೊಂಡಿವೆ ಎಂದು ಪುರಪಿತೃರು ಆರೋಪಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶುಕ್ರವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಚೇಂಬರ್ ಮಾಡಲು ಅಗೆದ ರಸ್ತೆಗಳು ಜನರು ತಿರುಗಾಡದ ಸ್ಥಿತಿಯಲ್ಲಿವೆ. ಈ ಬಗ್ಗೆ ಅಧಿಕಾರಿಗಳು ಮಾತನಾಡುತ್ತಿಲ್ಲ. ಇದಕ್ಕೆ ಹೊಣೆ ಯಾರು ಎಂದು ಪುರಸಭಾ ಸದಸ್ಯ ಫಯಾಜಮುಲ್ಲಾ, ಇಂಶಾದ್, ಕೈಸರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತಾಧಿಕಾರಿ ಡಾ.ನಯನಾ, ಮುಂದಿನವಾರ ಸಂಬಂಧಪಟ್ಟ ಇಲಾಖೆಯ ಸಭೆ ಕರೆದು ಚರ್ಚಿಸಲಾಗುವುದು. ಒಳಚರಂಡಿ ಸಮಸ್ಯೆ (drainage problem) ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದರು.

ಇದನ್ನೂ ಓದಿ :  ಎಲ್.ಪಿ.ಜಿ. ಪಂಪ್ ನಿರ್ಮಾಣಕ್ಕೆ ವಿರೋಧ

ಐ.ಆರ್.ಬಿ. ಅವಾಂತರ:
ಪಟ್ಟಣದ ರಂಗಿನಕಟ್ಟೆ, ಮಣ್ಕುಳಿ, ಸಾಗರ ರಸ್ತೆ ಹಾಗೂ ಮಾರುತಿನಗರದಲ್ಲಿ ಐ.ಆರ್.ಬಿ.ಯವರಿಂದಾಗಿ ಹೆದ್ದಾರಿ ನೀರು ಮನೆಗಳಿಗೆ ನುಗ್ಗುತ್ತಿದೆ. ಪುರಸಭೆ ಹಾಗೂ ಐ.ಆರ.ಬಿ.ಯ ನಿರ್ಲಕ್ಷ್ಯ ದಿಂದಾಗಿ ಭಟ್ಕಳ ರಾಜ್ಯವ್ಯಾಪಿ ಸುದ್ದಿಯಾಗುತ್ತಿದೆ. ಇದರ ಬಗ್ಗೆ ಪುರಸಭೆ ಕ್ರಮವಹಿಸಬೇಕು ಎಂದು ಸದಸ್ಯರಾದ ಅಲ್ತಾಫ ಖರೂರಿ, ರಾಘವೇಂದ್ರ ಗವಾಳಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಡಾ. ನಯನಾ, ಹೆದ್ದಾರಿ ಸಮಸ್ಯೆ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದೆ. ಶೀಘ್ರವೇ ಇದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ

ತಾಲೂಕು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸುರಕ್ಷಿತ ಶೆಟ್ಟಿ ಡೆಂಗ್ಯೂ ಜ್ವರ ಹರಡುವ ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು, ಮುನ್ನೆಚರಿಕೆಯಾಗಿ ಎಲ್ಲಾ ವಾರ್ಡಗಳಲ್ಲಿ ಫಾಗಿಂಗ್ ಮಾಡುವುದು ಮತ್ತು ಬ್ಲೀಚಿಂಗ್ ಸಿಂಪಡಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ :  ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಮಳೆಗಾಲ ಪೂರ್ವದಲ್ಲಿ ಚರಂಡಿ ಸಮರ್ಪಕ ಹೂಳೆತ್ತದ ಬಗ್ಗೆಯೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇಂಜಿನಿಯರ್ ಅರವಿಂದ ರಾವ್, ಪರಿಸರ ಅಭಿಯಂತ ವೆಂಕಟೇಶ ನಾವಡ, ಆರೋಗ್ಯಾಧಿಕಾರಿ ಸೋಜಿಯಾ, ಕಂದಾಯ ಅಧಿಕಾರಿ ವೆಂಕಟೇಶ ನಾಯ್ಕ ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.