ಜೋಯಿಡಾ: ಗೋವಾ -ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ್ ಸಮೀಪ ಡಕಾಯಿತರ ತಂಡದ ಇಬ್ಬರನ್ನು ಕಾಡಿನಲ್ಲಿ ಅಟ್ಟಾಡಿಸಿ ಪೊಲೀಸರು ಬಂಧಿಸಿದ್ದಾರೆ(Arrest of bandits).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ರಾಜಸ್ಥಾನ ಮೂಲದ ಗೋವರ್ಧನ ಬಾಬು ಸಿಂಗ್ ರಾಜಪುರೋಹಿತ್ ಮತ್ತು ಶ್ಯಾಮಲಾಲ ದೀಪರಾಮಜಿ ಮೇಘವಾಳ ಬಂಧಿತ ಆರೋಪಿಗಳು. ಬಂಧಿತರಿಂದ ಲೋಡೆಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದ ಆರ್.ವಿ.ಡಿ.

ಗೋವಾದಿಂದ ಹುಬ್ಬಳ್ಳಿ ಕಡೆಗೆ ಐವರು ಡಕಾಯಿತರ ತಂಡ ಪ್ರಯಾಣಿಸುತ್ತಿರುವ ಮಾಹಿತಿ ರಾಮನಗರ ಪೊಲೀಸರಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರಾಮನಗರ ಪಿ.ಎಸ್.ಐ. ಬಸರಾಜ ಮಬನೂರ ನೇತೃತ್ವದ ತಂಡ ಐವರಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ :  ಜುಲೈ ೨೯ರಂದು ವಿವಿಧೆಡೆ ಅಡಿಕೆ ಧಾರಣೆ

ಡಕಾಯತರು ಚೆಕ್ ಪೋಸ್ಟನಲ್ಲಿ ಪೋಲೀಸರನ್ನು ನೋಡಿ ವಾಹನದಿಂದ ಇಳಿದು ಓಡಿ ಪರಾರಿಯಾಗಿದ್ದರು. ನಂತರ ಮಾಹಿತಿ ತಿಳಿದ ಪೊಲೀಸರು ಅವರನ್ನು ಅರಣ್ಯ ಪ್ರದೇಶದಲ್ಲಿ ಅಟ್ಟಾಡಿಸಿ ಬಂಧಿಸಿದ್ದಾರೆ(Arrest of bandits). ಪರಾರಿಯಾದವರ ಶೋಧ ಕಾರ್ಯ ಕೈಗೊಂಡಿದ್ದಾರೆ.

ಇದನ್ನೂ ಓದಿ : ಹಳ್ಳದಲ್ಲಿ ಬಿದ್ದು ಕೃಷಿಕ ಸಾವು

ಗೋವಾದಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ಕಳವು ಮಾಡಲು ಈ ತಂಡ ತೆರಳಿತ್ತು ಎನ್ನಲಾಗಿದೆ. ಕೃತ್ಯವೆಸಗಲು ಸಾಧ್ಯವಾಗದೆ ವಾಪಸ್ ಅನಮೋಡದಿಂದ ವಾಪಸ್ಸಾಗುತ್ತಿದ್ದಾಗ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.