ಭಟ್ಕಳ: ಮಾರಿಯಮ್ಮನ ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆ ಹೊಂಡಗಳಿಂದ(pothole) ಕೂಡಿದೆ. ವಿಸರ್ಜನಾ ಮೆರವಣಿಗೆ ನಮ್ಮ ಊರಿನ ರಸ್ತೆಯಲ್ಲಿ ಸಾಗಿ ಕರಿಕಲ್ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆ ರಸ್ತೆಯು ಇನ್ನೂ ತನಕ ಹೊಂಡದಿಂದ ಕೂಡಿದೆ. ನಾಡಿದ್ದು ಮೆರವಣಿಗೆ ಸಾಗಲಿದ್ದು, ತಕ್ಷಣ ದುರಸ್ತಿ ಮಾಡಬೇಕು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪ್ರತಿ ವರ್ಷ ಮಾರಿ ಹಬ್ಬದ ಸಂದರ್ಭದಲ್ಲಿ ಮಾರಿ ಹಬ್ಬದ ಪೂರ್ವ ಭಾವಿ ಸಭೆ ನಡೆಸಿ ೨ ದಿನದ ಹಬ್ಬಕ್ಕೆ ಯಾವ ರೀತಿ ಸಿದ್ದತೆಗಳು ಆಗಬೇಕು. ಯಾವ್ಯಾವ ರೀತಿಯಲ್ಲಿ ಹಬ್ಬಕ್ಕೆ ಸಿದ್ಧತೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಮಾರಿ ವಿಸರ್ಜನೆಗೆ ತೆರಳುವ ಹನುಮಾನ ನಗರ ರಸ್ತೆಯು ಪ್ರತಿ ವರ್ಷ ಹಬ್ಬದ ಪೂರ್ವದಲ್ಲಿ ಹೊಂಡ(pothole l ಬಿದ್ದ ರಸ್ತೆಯನ್ನು ದುರಸ್ತಿ ಮಾಡುತ್ತಿದ್ದರು. ಆದರೆ ಇನ್ನೂ ತನಕ ಹೊಂಡಮಯವಾದ ರಸ್ತೆಯ ದುರಸ್ತಿ ಕಾರ್ಯ ಮಾಡಿಲ್ಲ.

ಇದನ್ನೂ ಓದಿ : ನಾಳೆ ಗದ್ದುಗೆ ಏರಲಿದ್ದಾಳೆ ಮಾರಮ್ಮ

ಅದೇ ರೀತಿ ಪೂರ್ವಭಾವಿ ಸಭೆಗಳು ಕಾಟಾಚಾರಕ್ಕೆ ನಡೆಯುತ್ತಿವೆ. ತಮಗೆ ಬೇಕಾದವವರನ್ನು ಕರೆದುಕೊಂಡು ಸುದ್ದಿ ಇಲ್ಲದೆ ಸಭೆಗಳು ಮಾಡುತ್ತಿದ್ದಾರೆ.
ಮೊದಲು ಪೂರ್ವಭಾವಿ ಸಭೆ ಹಾಗೂ ಶಾಂತಿ ಸಭೆಯ ವಿಚಾರ ಮಾಧ್ಯಮದಲ್ಲಿ ಪ್ರಕಟವಾಗುತ್ತಿತ್ತು. ಆದರೆ ಈಗ ಯಾವುದೇ ಮಾಧ್ಯಮದಲ್ಲೂ ಪ್ರಕಟವಾಗುತ್ತಿಲ್ಲ.

ಇದನ್ನೂ ಓದಿ : ಭಟ್ಕಳದಲ್ಲಿ ಶಾಂತಿ ಸಭೆ ನಡೆಯುತ್ತಿದೆಯೆ?

ಅಧಿಕಾರಿಗಳು ಯಾಕೆ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಇದು ಬೇಸರದ ಸಂಗತಿ. ಇನ್ನಾದರೂ ಅಧಿಕಾರಿ ಎಚ್ಚೆತ್ತುಕೊಂಡು ಮಾರಿ ಸಾಗುವ ರಸ್ತೆಯ ದುರಸ್ತಿ ಕೈಗೊಳ್ಳುತ್ತಾರೋ ಎಂದು ನೋಡಬೇಕು.

ಶ್ರೀನಿವಾಸ ನಾಯ್ಕ, ಆಟೋ ಚಾಲಕ, ಹನುಮಾನ ನಗರ, ಭಟ್ಕಳ.


ಓದುಗರ ಗಮನಕ್ಕೆ….
ನಿಮ್ಮೂರಿನ ಸಮಸ್ಯೆ, ಆಗು-ಹೋಗುಗಳ ಬಗ್ಗೆ ಬರೆದು ಕಳುಹಿಸಿ. ಓದುಗರ ಬರಹ ವಿಭಾಗದಲ್ಲಿ ಪ್ರಕಟಿಸಲಾಗುವುದು. – ಸಂ.
ವಾಟ್ಸಾಪ್: ೮೮೮೪೧೨೩೧೩೨
ಇಮೇಲ್: bhatkaldiary@gmail.com