ಭಟ್ಕಳ : ತಾಲೂಕಿನ‌ ಯುವ ಕವಿ‌ ಶಿವಾನಂದ ಮೊಗೇರ ಅವರ ಮೊದಲ ಕವನ ಸಂಕಲನ‌ ಕಡಲಾಳದ ಕಾವ್ಯ ನಿನ್ನೆ (ಆ.೪) ಮೈಸೂರಿನಲ್ಲಿ ಬಿಡುಗಡೆಗೊಂಡಿದೆ. ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ‌ ಕಡಲಾಳದ ಕಾವ್ಯ ಲೋಕಾರ್ಪಣೆ (book released) ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ಅಕ್ಷರ ನಾದ ಪಬ್ಲಿಕೇಶನ್ಸ್-ಎ.ಎಸ್.ಟಿ.ಆ‌ರ್, ಅಕ್ಷರ-ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕವಿ ಕಾವ್ಯ ಕಥಾ ಸಂಗಮ ಮೊದಲ ಆವೃತ್ತಿ-2024, ಅಕ್ಷರ ನಾದದ ಮೊದಲ ವಾರ್ಷಿಕೋತ್ಸವ ನಡೆದಿತ್ತು. ಈ ಸಂದರ್ಭ ತಾಲೂಕಿನ ಕರಿಕಲ್ ಗ್ರಾಮದ, ‘ಕಡಲ ಕವಿ’ ಶಿವಾನಂದ ಮೊಗೇರ ಅವರ ಕಡಲಾಳದ ಕಾವ್ಯ ಸಹಿತ ೩೮ ಕೃತಿಗಳ ಲೋಕಾರ್ಪಣೆಯಾಗಿದೆ (book released).

ಇದನ್ನೂ ಓದಿ : ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಸಮಾರಂಭವನ್ನು ಹಿರಿಯ ಸಾಹಿತಿ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬದ್ಧತೆ ಎಲ್ಲರಲ್ಲಿಯೂ ಬರುತ್ತಿದೆ ಎಂದರೆ ಅವರು ಕವಿಗಳಾಗುತ್ತಾರೆ ಎಂದರ್ಥ. ಲೇಖಕರಾಗುವುದು ಎಂದರೆ ಮನುಷ್ಯರಾಗುವುದು ಎಂದರ್ಥ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ :  ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

ತಂತ್ರಜ್ಞಾನದ ಒಳಗಿನ ಸಾಹಿತ್ಯ ದಾಖಲಾರ್ಹವೇ? ಎಂದರೆ ಅಲ್ಲ ಎಂದೇ ಹೇಳಬೇಕು. ಆದರೆ, ಮುದ್ರಣ ಮಾಧ್ಯಮ ಹೆಚ್ಚು ಕಾಲ ನೆಲೆ ನಿಲ್ಲುವಂತೆ ಮಾಡುತ್ತದೆ. ಜ್ಞಾನವೇ ದೊಡ್ಡದು. ನಿಮ್ಮ ಬರವಣಿಗೆಯಲ್ಲಿ ಅನುಭವಕ್ಕೆ ಆದ್ಯತೆ ಕೊಡಿ. ನಿಮ್ಮ ಅನುಭವದ ಶಕ್ತಿಯನ್ನು ಬರವಣಿಗೆಯಲ್ಲಿ ಹಂಚಿ ಎಂದು ಹೇಳಿದರು.

ಇದನ್ನೂ ಓದಿ : ಧಾರೇಶ್ವರದಲ್ಲಿ ಗುಡ್ಡಕುಸಿತ

ಜಗತ್ತು ತಂತ್ರಜ್ಞಾನದ ಜತೆಗೆ ತೊಡಗಿಸಿಕೊಂಡಿದೆ. ಹಾಗೆ ನೋಡಿದರೆ ಎಲ್ಲರೂ ಲೇಖಕರೇ, ಯಾರ ಯಾರಲ್ಲಿ ಮೊಬೈಲ್ ಇದೆಯೋ ಪ್ರತಿಯೊಬ್ಬರೂ ಸಾಮಾನ್ಯ ಜನತೆಯ ನೋವು, ಸ್ತ್ರೀಸಾಮಾನ್ಯರ ನೋವು, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಜಾಗವಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ೭೭ ಅಡಿ ಶ್ರೀರಾಮಚಂದ್ರನ ಕಂಚಿನ ವಿಗ್ರಹ ಲೋಕಾರ್ಪಣೆ

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ.ಮಂಜುಳಾ ಪಾವಗಡ, ಸಿದ್ದನಕೊಪ್ಪಲು ಕುಮಾರ್, ಡಿ.ಪದ್ಮನಾಭ, ನಟ ಸ್ಟೈಲ್ ಶಿವಕುಮಾ‌ರ್, ಪಬ್ಲಿಕೇಷನ್ ಅಧ್ಯಕ್ಷರಾದ ಡಾ.ಶ್ರುತಿ ಮಧುಸೂದನ್, ಉಪಾಧ್ಯಕ್ಷ ಮಧುಸೂದನ್ ಕೆ.ಆಚಾರ್, ಜಿಲ್ಲಾ ಕಸಾಪ ಉಪಾಧ್ಯಕ್ಷ ಡಾ.ಟಿ.ತ್ಯಾಗರಾಜು ಇತರರು ಹಾಜರಿದ್ದರು.

ಇದನ್ನೂ ಓದಿ : ಸರ್ಕಾರಿ ಹಬ್ಬಕ್ಕಾಗಿ ನೌಕರರಿಂದ ೧ ಸಾ.ರೂ. ದೇಣಿಗೆ

ಸಾಗರದ ಮೇಲಿನ ಬದುಕಿನ ಚಿತ್ರಣ :
“ಕಡಲ ಕವಿ” ಯೆಂಬ ಶಿರೋನಾಮಾಂಕಿತ ಭಟ್ಕಳ ತಾಲ್ಲೂಕಿನ ಕರಿಕಲ್ ಊರಿನವರಾದ ಶಿವಾನಂದ ಬಿ. ಮೊಗೇರ ಅವರ ಚೊಚ್ಚಲ‌ಕವನ ಸಂಕಲನ “ಕಡಲಾಳದ ಕಾವ್ಯ”. ಸ್ವತಃ ಮೀನುಗಾರರಾಗಿ, ಯಾಂತ್ರಿಕ ದೋಣಿಯಲ್ಲಿ ಕಾರ್ಮಿಕನಾಗಿ, ಯಾಂತ್ರಿಕ ದೋಣಿಯ ಚಾಲಕನಾಗಿ ತಾವು ಕಡಲಲ್ಲಿ ಕಣ್ಣಾರೆ ಕಂಡು ಅನುಭವಿಸಿದ ನೋವು – ನಲಿವು, ಸುಖ – ದುಃಖ, ಹತಾಶೆ… ಇವೆಲ್ಲವೂ ‘ಕಡಲಾಳದ ಕಾವ್ಯ” ದಲ್ಲಿ ಕಣ್ಕಟ್ಟಿದೆ ಎಂದು ಕೃತಿಯ ಬೆನ್ನುಡಿಯಲ್ಲಿ ಶಿಕ್ಷಕಿ, ಸೋಡಿಗದ್ದೆ ಮೂಲದ ಲೀಲಾಧರ ಮೊಗೇರ ಬರೆದಿದ್ದಾರೆ. ಸಾಗರದ ಮೇಲಿನ ಬದುಕಿನ ಚಿತ್ರಣದೊಂದಿಗೆ ಬದುಕಿನ ಪುಟದಲ್ಲಿ ಬಂದು ಹೋಗುವವರ ಗೆಳತನ, ದ್ವೇಷ, ಅವಮಾನ, ಸನ್ಮಾನ… ಎಲ್ಲವೂ ಮೇಳೈಸಿವೆ. ಕವಿತೆಯೆಂದರೆ ಬರೀ ಅಕ್ಷರಗಳಲ್ಲ… ಕವಿಯೆದೆಯ ಭಾವಗಳು…! ಹೆಣ್ಣು ದಿಟ್ಟೆಯಾಗಿ, ಕನಸ್ಸಲ್ಲಿ ಕಾಡಿದ ಬೆಡಗಿಯಾಗಿ, ಮೊಬೈಲ್ ನಲ್ಲಿ ಕಂಡ ಚೆಲುವೆಯಾಗಿ, ಬೆಳದಿಂಗಳಾಗಿ, ಅಮ್ಮನಾಗಿ ಕವನಗಳಲ್ಲಿ ಪ್ರತಿಧ್ವನಿಸಿದೆ. ಪುನೀತರು ಸೂರ್ಯ ಚಂದ್ರರಾಗಿ ಅಜರಾಮರರಾಗಿದ್ದಾರೆ. ಮನುಜ, ದುಷ್ಟಟಗಳ ದಾಸನಾದರೆ ಚಟ್ಟವನ್ನೇ ಕಟ್ಟುವೆ ಈ ಚಟಕ್ಕೆ…! ಎಂಬ ಸಾಮಾಜಿಕ ಕಳಕಳಿಯೂ ಇದೆ ಎಂದು ಲಿಲಾಧರ ಮೊಗೇರ ವಿಶ್ಲೇಷಿಸಿದ್ದಾರೆ.