ಭಟ್ಕಳ : ೧೫ ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧನಿಗೆ ಸ್ವಾಗತಿಸುವ(welcome) ಕಾರ್ಯಕ್ರಮ‌ ಇಂದು (ಆ.೬) ಸಂಜೆ ಏರ್ಪಡಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳ ತಾಲೂಕಿನ‌ ಹೆಬಳೆ ಗ್ರಾಮದ ನಾಗರಾಜ ವೆಂಕ್ಟಯ್ಯ‌ ದೇವಡಿಗ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಂದು ಸಂಜೆ ೫ ಗಂಟೆಗೆ ಊರಿಗೆ ಬರುತ್ತಿರುವ ಅವರನ್ನು ಸ್ವಾಗತಿಸಲು(welcome) ಹೆಬಳೆ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಬಳೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನಿವೃತ್ತ ಯೋಧರನ್ನು ಭಟ್ಕಳದ ಮುಖ್ಯ ವೃತ್ತದಲ್ಲಿ ಬರಮಾಡಿಕೊಳ್ಳಲಿದ್ದಾರೆ. ತೆರೆದ ವಾಹನದಲ್ಲಿ ಬೈಕ್ ಮೆರವಣಿಗೆ ಮೂಲಕ ಸ್ವಗ್ರಾಮದಲ್ಲಿರುವ ಅವರ ಮನೆಗೆ ಕರೆತರಲಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಬೆಂಗಳೂರಿಗೆ ಹೊರಟಿದ್ದ ಬಸ್ಸಿಗೆ ಬೆಂಕಿ

ಭಟ್ಕಳ ತಾಲೂಕಿನ ದೇಶಭಕ್ತ ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಸ್ತ ದೇಶಭಕ್ತ ಸಾರ್ವಜನಿಕರು ಸಂಜೆ ೫ ಗಂಟೆಗೆ ಭಟ್ಕಳದ ಮುಖ್ಯ ವೃತ್ತದಲ್ಲಿ ಸೇರುವಂತೆ ಭಟ್ಕಳ ತಾಲ್ಲೂಕು ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ‌ ನಾಯ್ಕ ಕೋರಿದ್ದಾರೆ.