ಕಾರವಾರ : ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ (spot death) ಘಟನೆ ಕಾರವಾರ (karwar) ತಾಲೂಕಿನ ಗಾಂವಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ತಾಲೂಕಿನ ಕಾಜುಭಾಗ ನಿವಾಸಿ ವಿನೋದ ನಾಯ್ಕ(30) ಮೃತ ದುರ್ದೈವಿ. ಬೈಕ್ ಸವಾರ ಗಾಂವಗೇರಿ ಕಡೆಯಿಂದ ಹೆದ್ದಾರಿ ಕಡೆ ಬರುತ್ತಿದ್ದಾಗ ಗೋವಾ(Goa) ಕಡೆಯಿಂದ ಬರುತ್ತಿದ್ದ ಬಲೆನೋ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ (spot death).

ಇದನ್ನೂ ಓದಿ : ಕೈ ಚೀಲದಲ್ಲೇ ಸುಟ್ಟು ಕರಕಲಾದ ಮಗನ ಅವಶೇಷ ಕೊಂಡೊಯ್ದು ತಂದೆ

ಘಟನಾ ಸ್ಥಳಕ್ಕೆ ಚಿತ್ತಾಕುಲಾ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಸರ್ಕಾರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಮನವಿ