ಭಟ್ಕಳ: ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಚಿತ್ರನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಗುರುವಾರ ಸಂಜೆ 5 ಗಂಟೆಗೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಸಂಜೆ 6 ಗಂಟೆಗೆ ಚಿತ್ರಾಪುರ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ ಎರಡೂವರೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು.
ಇದನ್ನೂ ಓದಿ : ಇಬ್ಬರು ಕಳ್ಳತನ ಆರೋಪಿಗಳ ಬಂಧನ
ಚಿತ್ರಾಪುರಕ್ಕೆ ಯಶ್ -ರಾಧಿಕಾ ದಂಪತಿಗಳು ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ಹೊರಬರುವುದನ್ನೇ ಕಾಯುತ್ತಿದರು. ರಾತ್ರಿ 8.30ಕ್ಕೆ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು. ಇವರೊಂದಿಗೆ ಮಗಳು ಐರಾ, ಮಗ ಯಥರ್ವ ಹಾಗೂ ರಾಧಿಕಾ ಪಂಡಿತ ತಂದೆ -ತಾಯಿ ಆಗಮಿಸಿದ್ದರು.