ಕುಮಟಾ(Kumta): ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಮಟಾದ ಜನಪರ ವೇದಿಕೆ ಮತ್ತು ಭಾರತ ಕೃಷಿಕ ಸದನ ಜಂಟಿಯಾಗಿ ಮುಖ್ಯಮಂತ್ರಿ ಅವರನ್ನು ಮನವಿ ಪತ್ರದ ಮೂಲಕ ಆಗ್ರಹಿಸಿದೆ (Appeal). ಇಲ್ಲಿನ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ್ದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ (DC Lakshmipriya) ಅವರಿಗೆ ಜನಪರ ವೇದಿಕೆಯ ಅಧ್ಯಕ್ಷ ಎಂ.ಜಿ.ಭಟ್ಟ ಹಾಗೂ ಭಾರತ ಕೃಷಿ ಸದನದ ಅಧ್ಯಕ್ಷ ಪ್ರದೀಪ ಹೆಗಡೆ ಹಾಜರಿದ್ದ ರೈತರ (Farmers) ಸಮ್ಮುಖದಲ್ಲಿ ಮನವಿ ಪತ್ರ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮತ್ತು ನಿರಂತರ ಮಳೆಯಿಂದಾಗಿ ರೈತರ ಮುಖ್ಯ ಬೆಳೆಯಾದ ಅಡಿಕೆ ಮತ್ತು ಕಾಳುಮೆಣಸು ತೀವ್ರ ಹಾನಿಯಾಗಿದೆ ಅಡಿಕೆ ಭಾಗಶಃ ನಾಶವಾಗಿವೆ. ಕಾಳುಮೆಣಸು ಸಂಪೂರ್ಣ ಹಾಳಾಗಿದೆ. ನಮ್ಮ ಬದುಕು ದುಸ್ಥರವಾಗುವುದು ಖಚಿತ ಮತ್ತು ಬೆಳೆ ವಿಮೆ (crop insurance) ಈ ಹಾನಿಯನ್ನು ಪರಿಗಣಿಸಲಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಆರಾಧನಾ ಮಹೋತ್ಸವ ಆರಂಭ
ಈ ಹಿಂದೆ ಮೈಲುತುತ್ತಕ್ಕೆ ಸಹಾಯಧನ ಸಿಗುತ್ತಿತ್ತು. ಅದು ಕೂಡ ಪುನಃ ರೈತರಿಗೆ ಲಭ್ಯವಾಗಬೇಕಿದೆ. ಹಾಗಾಗಿ ರೈತರಿಗೆ ಆದ ಹಾನಿಯನ್ನು ಅಂದಾಜಿಸಿ ಅವರಿಗೆ ಆದ ನಷ್ಟವನ್ನು ಪೂರ್ತಿ ನೀಡಲಾಗದಿದ್ದರೂ ಬದುಕಲಾದರೂ ಸಾಧ್ಯವಾಗುವಂತೆ ಇಲಾಖೆಯ ಮೂಲಕ ಹಾನಿ ವರದಿ ಸಿದ್ಧಪಡಿಸಿ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು. ಶೀಘ್ರವಾಗಿ ಈ ಕೆಲಸ ಕೈಗೊಂಡು ಹಾನಿ ಅಂದಾಜಿಸಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ಪುರಸಭೆಯ ಉಪಾಧ್ಯಕ್ಷರ ಅವಿರೋಧ ಆಯ್ಕೆ
ದೀರ್ಘಾವಧಿಯ ಬೆಳೆಗಳನ್ನು ಪಹಣಿ ಪತ್ರಿಕೆಯಲ್ಲಿ ಪದೇ ಪದೇ ಬದಲಾಯಿಸುವದರಿಂದ ರೈತರಿಗೆ ಬೆಳೆಸಾಲ ಪಡೆಯುವಾಗ ಸಮಸ್ಯೆ ಉಂಟಾಗುತ್ತದೆ. ದೀರ್ಘಾವಧಿ ಬೆಳೆಯನ್ನು ಪಹಣಿಯಲ್ಲಿ ಬದಲಾವಣೆಗೆ ರೈತನೇ ಬಯಸಿದಲ್ಲಿ ಮಾತ್ರ ಅವಕಾಶ ನೀಡಬೇಕು.
ಬೆಳೆದರ್ಶಕ ಅಪ್ಲಿಕೇಶನ್ ನ್ಯೂನ್ಯತೆ ಸರಿಪಡಿಸಬೇಕು. (ಉದಾಹರಣೆಗೆ ಒಂದು ಎಕರೆಯಲ್ಲಿ ರೈತ ಮುಖ್ಯ ಬೆಳೆ ಅಡಿಕೆ ಆದಲ್ಲಿ ಎರಡನೇ ಉಪಬೆಳೆ ಎರಡು ಎಕರೆ ಕಾಳುಮೆಣಸು ಹಾಕಿದಲ್ಲಿ ಅದನ್ನು ತೋರಿಸಲು ಅವಕಾಶ ಇರುವುದಿಲ್ಲ). ಇಲ್ಲಿನ ಸಾಂಪ್ರದಾಯಿಕ ಬೆಳೆ ಅಡಿಕೆ ಆಗಿರುವುದರಿಂದ ಅದನ್ನು ನಿಯಂತ್ರಣಕ್ಕೆ ಒಳಪಡಿಸಿ ಮಿತಿಮೀರಿದ ವಿಸ್ತರಣೆಗೆ ಕಡಿವಾಣ ಹಾಕಬೇಕು. ಬೆಳೆ ಪರಿಹಾರ, ರೈತರಿಗೆ ಆದ ಹಾನಿ ಮುಂತಾದ ಪರಿಹಾರ ನೀಡುವಾಗ ಕಾಲಮಾನಕ್ಕೆ ತಕ್ಕಂತೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಬೆಳೆಸಾಲ ಪಡೆಯುವಾಗ ಸಾಮೂಹಿಕ ಆಸ್ತಿ ಎಂದಿದ್ದರೆ ಆ ಕುಟುಂಬದ ಒಬ್ಬ ರೈತ ಬೆಳೆಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಬೆಳೆವಿಮೆ ಅಪ್ಲೋಡ್ ಮಾಡುವಾಗ ಅಗುವ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಕಾಡುಪ್ರಾಣಿಗಳಿಂದ ಆಗುವ ಬೆಳೆ ಹಾನಿ ತಪ್ಪಿಸಲು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಆಗಸ್ಟ್ ೨೦ರಂದು ವಿವಿಧೆಡೆ ಅಡಿಕೆ ಧಾರಣೆ
ಮಳೆಮಾಪನ ಕೇಂದ್ರ ಹಾಳಾದಲ್ಲಿ ಹವಾಮಾನ ಆಧಾರಿತ ಹೇಗೆ ಲೆಕ್ಕ ಹಾಕುತ್ತೀರಿ? ಮತ್ತು ಅದಕ್ಕೆ ಪರಿಹಾರವೇನು.?, ಚಿಕ್ಕಹಿಡುವಳಿಯ ರೈತರಾಗಿರುವವರಿಗೆ ಮತ್ತು ತುಂಡು ಭೂಮಿ ಹೊಂದಿರುವ ರೈತರು ತನ್ನ ಪಹಣಿ ಪತ್ರಿಕೆಯನ್ನು ಪರಿಹಾರಕ್ಕೆ ಪರಿಗಣಿಸುವಾಗ ಪ್ರತಿಯೊಂದು ಪಹಣಿ ಒದಗಿಸಬೇಕಾಗುತ್ತಿದೆ. ಅದಕ್ಕೆ ಬರುವ ಪರಿಹಾರ ಪಹಣಿ ಪತ್ರಿಕೆ ಪಡೆಯಲು ನೀಡುವ ಹಣಕ್ಕಿಂತಲೂ ಕಡಿಮೆ. ಹಾಗಾಗಿ ರೈತನ ಎಫ್.ಐ.ಡಿ. ಹಾಕಿದಾಗ ಆ ಎಲ್ಲಾ ದಾಖಲೆ ಪರಿಗಣಿಸಬೇಕೇ ವಿನಃ ರೈತನಿಗೆ ಎಲ್ಲ ದಾಖಲೆ ಒದಗಿಸುವಂತೆ ಕೇಳುವ ಈಗಿನ ಕ್ರಮಬದಲಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಎಐಎಂಸಿಎ ವಿದ್ಯಾರ್ಥಿನಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ
ಮನವಿ (Appeal)ಸಲ್ಲಿಕೆ ಸಮಯದಲ್ಲಿ ಸುಬ್ರಹ್ಮಣ್ಯ ಹೆಗಡೆ, ಸಿ.ಜಿ. ಹೆಗಡೆ, ಟಿ.ವಿ. ಹೆಗಡೆ, ಕೇಶವ ಗೌಡ, ಉದಯ ಹರಿಕಾಂತ, ವಿನಾಯಕ ನಾಯ್ಕ, ಮಹೇಶ ಮಡಿವಾಳ ಸೇರಿದಂತೆ ೮೦ಕ್ಕು ಹೆಚ್ಚು ರೈತರು ಹಾಜರಿದ್ದರು.
ಇದನ್ನೂ ಓದಿ : ನೇಣು ಬಿಗಿದುಕೊಂಡ ಮದ್ಯವ್ಯಸನಿ ಯುವಕ