ಹೊನ್ನಾವರ(Honnavar): ತಾಲೂಕಿನ ಕಾಸರಕೋಡ ಟೊಂಕಾ ಸಮೀಪದಲ್ಲಿ ಮೀನುಗಾರಿಕೆ ನಡೆಸಿ ಬರುತ್ತಿದ್ದ ಅನ್ಸಾರ್ ಮಾಲಕತ್ವದ ಅರೇಬಿಯನ್ ಬೋಟ್ ಅಳಿವೆಯಲ್ಲಿ ಸಿಲುಕಿದೆ (Boat Stuck).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಳ ಸಮುದ್ರಕ್ಕೆ ಮೀನುಗಾರಿಕೆ ನಡೆಸಿ ವಾಪಸ್ಸು ಬಂದರು ಪ್ರದೇಶಕ್ಕೆ ಆಗಮಿಸುವಾಗ ಈ ಘಟನೆ ಸಂಭವಿಸಿದೆ. ಸುಮಾರು ಮೂವತ್ತಕ್ಕೂ ಅಧಿಕ ಮೀನುಗಾರರು (Fishermen) ಬೋಟನಲ್ಲಿದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬ್ಬಿಣದ ಬೋಟ್ ಆಗಿರವುರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳೀಯ ಮೀನುಗಾರರು ಬೋಟನಲ್ಲಿದ್ದ ಮೀನುಗಾರರನ್ನು ಹಾಗೂ ಮೀನುಗಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ದುರ್ಗಪ್ಪ ಗುಡಿಗಾರ ಯಕ್ಷಗಾನ ಟ್ರಸ್ಟ್ ವಾರ್ಷಿಕೋತ್ಸವ
ಅಳಿವೆಯಲ್ಲಿನ ಹೂಳಿನ ಸಮಸ್ಯೆಯಿಂದ ಈ ಭಾಗದಲ್ಲಿ ಪದೇ ಪದೇ ಇಂತಹ ದುರಂತ ಸಂಭವಿಸುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ಮೀನುಗಾರಿಕೆಯ ಸಚಿವರು ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯ ರಂಪಾಟ