ಬೆಂಗಳೂರು (Bengaluru): ೨೦೦೭ರಲ್ಲಿ ಜಿಲ್ಲಾ ಪಂಚಾಯತ್ (ZP) ಚುನಾವಣೆಯಲ್ಲಿ (election) ಸ್ಪರ್ಧಿಸಲು ಮೀನುಗಾರಿಕೆ ಸಚಿವ (fisheries minister) ಮಂಕಾಳ ವೈದ್ಯ (Mankal Vaidya) ನಕಲಿ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು (caste certificate) ಬಳಸಿದ್ದಾರೆ ಎಂದು ಭಟ್ಕಳ ಮೂಲದ ವೇದಿಕೆಯು ಆರೋಪಿಸಿದೆ. ಈ ಪ್ರಕರಣದ ಕುರಿತು, ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಕರ್ನಾಟಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ರಕ್ಷಣಾ ವೇದಿಕೆ ರಾಜ್ಯಪಾಲ (governor) ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ಮೊಗೇರ” (moger) ಎಂಬ ಹೆಸರಿನ ಎರಡು ಸಮುದಾಯಗಳಿವೆ. ಮೊಲ ಬೇಟೆಯಲ್ಲಿ ತೊಡಗಿರುವ ಒಂದು ಸಮುದಾಯವನ್ನು ‘ಅಸ್ಪೃಶ್ಯ’ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದು ಒಬಿಸಿಗಳಲ್ಲಿ ವರ್ಗ ೧ರ ಅಡಿಯಲ್ಲಿ ಬರುವ ಮೀನುಗಾರಿಕೆ ಸಮುದಾಯವಾಗಿದೆ. ಮಂಕಾಳ ವೈದ್ಯ (Mankal Vaidya) ಒಬಿಸಿ ಮೊಗೇರ ಸಮುದಾಯಕ್ಕೆ ಸೇರಿದವರು. “ಆದರೆ ತಾನು ಎಸ್‌ಸಿ ಮೊಗೇರ ಎಂದು ಹೇಳಿಕೊಂಡು ೨೦೦೭ರಲ್ಲಿ ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ” ಎಂದು ಕರ್ನಾಟಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ರಕ್ಷಣಾ ವೇದಿಕೆಯ ಭಟ್ಕಳ ಘಟಕ ಮನವಿಯಲ್ಲಿ ತಿಳಿಸಿದೆ.
ಇದನ್ನೂ ಓದಿ : Janaspandana/ ಭಟ್ಕಳದಲ್ಲಿ ಸಚಿವರ ಜನಸ್ಪಂದನ ಕಾರ್ಯಕ್ರಮ



