ಭಟ್ಕಳ (Bhatkal) : ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರಾಧಿಕಾರಿ ಕಾರ್ಯಾಲಯ ವತಿಯಿಂದ ಆಯೋಜಿಸಲಾದ ಭಟ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ (sports event) ಭಟ್ಕಳದ ಆನಂದಾಶ್ರಮ ಕಾನ್ವೆಂಟ್ (Convent) ಪ್ರೌಢಶಾಲೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೀರಾಗ್ರಣಿ (Veeragrani) ಪ್ರಶಸ್ತಿ ಪಡೆದುಕೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನ್ಯೂ ಇಂಗ್ಲೀಷ್ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಪ್ರೌಢಶಾಲೆ ಈ ಕ್ರೀಡಾಕೂಟ ಆಯೋಜಿಸಿತ್ತು. ಆನಂದಾಶ್ರಮ ಕಾನ್ವೆಂಟ್‌ ಶಾಲೆಯು  ವೈಯಕ್ತಿಕ ವಿಭಾಗದಲ್ಲಿ ೧೦೦ ಮೀಟರ್ ಓಟ, ೨೦೦ ಮೀಟರ್ ಓಟ, ೪೦೦ ಮೀಟರ್ ಓಟ , ೧೧೦ ಹರ್ಡಲ್ಸ್, ಉದ್ದ ಜಿಗಿತ, ತ್ರಿವಿಧ ಜಿಗಿತ, ೪×೧೦೦ ಮತ್ತು ೪×೪೦೦ ರಿಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ೮೦೦ ಮೀಟರ್ ಓಟ, ತ್ರಿವಿಧ ಜಿಗಿತ, ೪೦೦ ಹರ್ಡಲ್ಸ್, ಎತ್ತರ ಜಿಗಿತ, ೧೫೦೦ ಮೀಟರ್ ಓಟ, ಹ್ಯಾಮರ್‌ ಎಸೆತ, ೪೦೦ ಮೀಟರ್ ಓಟ, ೮೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಇದನ್ನೂ ಓದಿ : ಮೃತ ಬೈಕ್‌ ಸವಾರ ಸಹಿತ ನಿಂತಿದ್ದ ಲಾರಿಯ ಚಾಲಕನ ವಿರುದ್ಧ ದೂರು

ಬಾಲಕಿಯರ ವಿಭಾಗದಲ್ಲಿ ೨೦೦ ಮೀಟರ್ ಓಟ, ಉದ್ದ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್ ಎಸೆತ, ಹ್ಯಾಮರ್‌ ಎಸೆತ, ೪×೧೦೦ ರಿಲೆ ಪ್ರಥಮ ಸ್ಥಾನ ಪಡೆದಿದೆ. ೧೦೦ ಮೀಟರ್ ಓಟ, ೪೦೦ ಮೀಟರ್ ಓಟ, ಎತ್ತರ ಜಿಗಿತ, ೮೦೦ ಮೀಟರ್ ಓಟ, ೪×‌೧೦೦ ರಿಲೆ ದ್ವಿತೀಯ ಸ್ಥಾನ ಗಳಿಸಿದರೆ, ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ಗುಂಪು ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಕಬ್ಬಡ್ಡಿ, ತ್ರೊ ಬಾಲ್, ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗಗದಲ್ಲಿ ತ್ರೊ ಬಾಲ್, ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್ ಪ್ರಥಮ ಸ್ಥಾನ ಹಾಗೂ ಕಬ್ಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು.

ವಿಡಿಯೋ ಸಹಿತ ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಕಾರ್ಯಾಲಯ ಉದ್ಘಾಟನೆ

ವೈಯಕ್ತಿಕ ಬಾಲಕರ ವಿಭಾಗದಲ್ಲಿ ಪೃಥ್ವಿ ಸುರೇಶ ನಾಯ್ಕ ಹಾಗೂ ವೈಯಕ್ತಿಕ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ ಪಟಗಾರ ವಲಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಲಯ ವೀರಾಗ್ರಣಿ (Veeragrani) ಪ್ರಶಸ್ತಿ ತಮ್ಮದಾಗಿಸಿಕೊಂಡರು. ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣೀಕರ್ತರಾದ ದೈಹಿಕ ಶಿಕ್ಷಕ ಮಹೇಶ ನಾಯ್ಕ ಹಾಗೂ ಸಹಕರಿಸಿದ ಎಲ್ಲಾ ಶಿಕ್ಷಕರಿಗೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಶ್ಲಾಘಿಸಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಶುಚಿ ರುಚಿ ವಾಹನಕ್ಕೆ ಚಾಲನೆ