ಭಟ್ಕಳ(Bhatkal): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ (Railway station) ಟ್ಯಾಕ್ಸಿ ಸ್ಟ್ಯಾಂಡ್ (Taxi stand) ಮಾಡಲು ಅನುಕೂಲ ಮಾಡಿಕೊಡಬೇಕೆಂದು ಭಟ್ಕಳ ಟ್ಯಾಕ್ಸಿ ಚಾಲಕ- ಮಾಲಕರ ಸಂಘದಿಂದ ಭಟ್ಕಳ ರೈಲ್ವೆ ಸ್ಟೇಷನ್ ಶಾಖಾಧಿಕಾರಿಗೆ ಮನವಿ ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈಗಾಗಲೇ ಪಕ್ಕದ ತಾಲೂಕು ಬೈಂದೂರು (byndooru) ರೈಲ್ವೆ ನಿಲ್ದಾಣದಲ್ಲಿ ಟೂರಿಸ್ಟ್ ಕಾರಿನವರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಬಾಡಿಗೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಭಟ್ಕಳದಲ್ಲಿ ನಮ್ಮ ಸಂಘದ ಅಡಿಯಲ್ಲಿ ೨೫೦ ರಿಂದ ೨೬೦ ಬಾಡಿಗೆ ಕಾರುಗಳು ನೋಂದಣಿಯಾಗಿವೆ. ಬಾಡಿಗೆ ವೃತ್ತಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಇಲ್ಲಿನ ಕೊಂಕಣ ರೈಲ್ವೆ (Konkan railway) ನಿಲ್ದಾಣದಲ್ಲಿ ದಿನನಿತ್ಯ ಸಾವಿರಾರು ಪ್ರಮಾಣಿಕರು ಬಂದಿಳಿಯುತ್ತಾರೆ. ಈ ಪ್ರಯಾಣಿಕರಿಗೆ ದೂರದ ಊರುಗಳಿಗೆ ಹೋಗಲು ಬಾಡಿಗೆ ಕಾರಿನ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವೀರಾಗ್ರಣಿ ಪ್ರಶಸ್ತಿ
ಪಕ್ಕದ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಬಾಡಿಗೆ ಕಾರಿನವರಿಗೆ ಅವಕಾಶ ಮಾಡಿಕೊಟ್ಟಂತೆ ನಮ್ಮ ಭಟ್ಕಳ ಸಂಘದ ಬಾಡಿಗೆ ಕಾರಿನವರಿಗೂ ಸಹ ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಭಟ್ಕಳ ರೈಲ್ವೆ ನಿಲ್ದಾಣದ ಶಾಖಾಧಿಕಾರಿ ಪಾರ್ವತಿ ದೇವಾಡಿಗರವರಿಗೆ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸೂರ್ಯಕಾಂತ ನಾಯ್ಕ ಮತ್ತು ಸಂಘದ ಪಧಾಧಿಕಾರಿಗಳು ಇದ್ದರು.
ಇದನ್ನೂ ಓದಿ : ಮೃತ ಬೈಕ್ ಸವಾರ ಸಹಿತ ಲಾರಿ ಚಾಲಕನ ವಿರುದ್ಧ ದೂರು