ಭಟ್ಕಳ (Bhatkal) : ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಸೋಮವಾರ ಭಟ್ಕಳದಲ್ಲಿ ಈದ್ ಮಿಲಾದ್ (Eid Milad) ಅಂಗವಾಗಿ ಮುಸ್ಲಿಮರು ರೋಗಿಗಳಿಗೆ ಹಣ್ಣು ಹಂಪಲು(Fruit distribution) ವಿತರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇಲ್ಲಿನ ಬೆಳಲಖಂಡ ಅಲ್ ಬಿಲಾಲ್ ಯೂತ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಮತ್ತು ಸ್ನೇಹ ವಿಶೇಷ ಮಕ್ಕಳ ಶಾಲೆಗೆ ಹಣ್ಣು ಹಂಪಲು (Fruit distribution) ಮತ್ತು ಬಿಸ್ಕೆಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಲ್ ಬಿಲಾಲ್ ಯೂತ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಯೂಸುಫ್ ಮನಿಯಾರ್, ಸೈಯದ್ ಹಮದ್, ಎಜಾಜ್, ಅಬಿದ್, ರಿಯಾಜ್, ನಬಿಲ್ ಶೇಕ್, ಫಜ್ಲು ಖಾನ್, ಸಲೀಂ ಮೊಹಮ್ಮದ್ ಯೂಸುಫ್, ಶುಯೈಬ್ ಕಪ್ಪಾ, ಫೈಜಾನ್ ಅರ್ಮಾನ್, ತೌಫಿಕ್, ಇಲ್ಯಾಸ್ ಮನಿಯಾರ್, ಸದ್ದಾಂ ಶೇಖ, ಫೈಸಲ್ ಖಾನ್, ಮುಕ್ರಂ ಶೇಖ್, ರಕೀಬ್, ಕಾಸಿಂ ಮುಂತಾದವರು ಉಪಸ್ಥಿತರಿದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : ಭಟ್ಕಳದಲ್ಲಿ ಸಡಗರದ ಈದ್ ಮಿಲಾದ್ ಮೆರವಣಿಗೆ