ಕಾರವಾರ (Karwar): ೨೦೨೨-೨೩ರ ಸಶಸ್ತ್ರ ಕಾನ್ಸ್ಟೇಬಲ್ (CAR/DAR) (ಪುರುಷ & ತೃತೀಯ ಲಿಂಗ)-೩೦೬೪ ಹುದ್ದೆಗಳ ನೇಮಕಾತಿ ಕುರಿತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕಕ್ಕೆ ಹಂಚಿಕೆಯಾದ ೮೦ ಸಶಸ್ತ್ರ ಪೊಲೀಸ ಕಾನ್ಸ್ಟೇಬಲ್ (CAR/DAR) ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೆ.೧೨ ರಂದು ಹೊರಡಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಾರವಾರ ಜಿಲ್ಲಾ ಪೊಲೀಸ್ ಕಛೇರಿಯ ನಾಮಫಲಕದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಂತರ್ಜಾಲದಲ್ಲಿ (https://uttarakannadapolice.karnataka.gov.in) ಪ್ರಕಟಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಎಂ.ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ : ಸೇತುವೆ ಮೇಲಿಂದ ನದಿಗೆ ಬಿದ್ದು ಬೈಕ್ ಸವಾರ ಸಾವು