ರಾಯಚೂರು : ಉತ್ತರ ಕನ್ನಡ (Uttara Kannada) ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ (Anantkumar hegde) ಈ ಬಾರಿ ಟಿಕೆಟ್ ಕೈತಪ್ಪಿದ (Ticket miss) ವಿಚಾರವಾಗಿ ಟಿಕೆಟ್ ಗುಟ್ಟನ್ನು ಬಿಜೆಪಿ ಮುಖಂಡ (BJP Leader) ಚಲವಾದಿ ನಾರಾಯಣಸ್ವಾಮಿ (Chalavadi Narayanswamy) ರಟ್ಟು ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚಲವಾದಿ ನಾರಾಯಣಸ್ವಾಮಿ, ಅನಂತ್ ಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ರು. ಕೇಂದ್ರ ಮಂತ್ರಿ ಇದ್ದಾಗ ಅವರೇಳಿದ್ರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾರ್ಲಿಮೆಂಟ್ ಕರೆಸಿದ್ರು. ದೇಶದ ಕ್ಷಮೆ ಕೇಳುವಂತೆ ಹೇಳಿದ್ರು. ಮತ್ತೆ ಸಂವಿಧಾನ ಬದಲಾವಣೆ ಮಾತನಾಡಿದ್ರು. ಅದ್ಕೆ ನಾನೇ ನಮ್ಮ ಮುಖಂಡರಿಗೆ ಖಡಕ್ ಆಗಿ ಹೇಳಿದೆ. ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಅಂತೇಳಿದ್ದೆ. ನಮ್ಮ ಪಕ್ಷ ಅವರಿಗೆ ಟಿಕೆಟ್ ಕೊಡದೆ (ticket miss) ತಿರಸ್ಕಾರ ಮಾಡಿಬಿಟ್ಟಿತ್ತು ಎಂದು ಹೇಳಿದರು.

ಇದನ್ನೂ ಓದಿ : ARM Cinema/ ಪ್ಯಾನ್ ಇಂಡಿಯಾ ಸ್ಟಾರ್ ಆದ ಟೋವಿನೋ ಥಾಮಸ್!

ಇದು ನಮ್ಮ ಬದ್ದತೆ. ಈಗ ನಿಮ್ಮ ತಾಕತ್ತು ತೋರಿಸಿ. ನಮ್ಮ ತಾಕತ್ತು ಈಗಾಗಾಲೇ ತೋರಿಸಿ ಆಯ್ತು. ಭಾರತೀಯ ಜನತಾ ಪಕ್ಷದ ತಾಕತ್ತು ಏನ್ ಅಂತ ತೋರಿಸಿ ಆಯ್ತು ಎಂದು ಕಾಂಗ್ರೆಸ್‌ಗೆ ರಾಯಚೂರಲ್ಲಿ ಚಲುವಾದಿ ನಾರಾಯಣಸ್ವಾಮಿ ಸವಾಲೆಸೆದಿದ್ದಾರೆ.

ಚಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಮೂವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು