ಗೋಕರ್ಣ (Gokarna): ಚರಸ್ (charas) ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ ಹಚ್ಚಿದ ಗೋಕರ್ಣ ಠಾಣೆ ಪೊಲೀಸರು (Gokarna police) ಅಂತರ್ ರಾಜ್ಯ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗೋಕರ್ಣ ಠಾಣೆ ಪಿಎಸೈ ಖಾದರ್ ಭಾಷಾ ಅವರಿಗೆ ಬಂದ ಮಾಹಿತಿ ಮೇರೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡಗೇರಿ ಗ್ರಾಮದ ಬಿದ್ರಗೇರಿ ಕ್ರಾಸ್ನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಸೆ. ೨೨ರಂದು ಮಧ್ಯಾಹ್ನ ೧೨.೩೦ರಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ದಾಳಿ ನಡೆಸಲಾಗಿತ್ತು. ಹಿಮಾಚಲ ಪ್ರದೇಶ ಮೂಲದ ಗೋವಾ ನಿವಾಸಿ ರಾಜುಸಿಂಗ್ ಮಾನಸಿಂಗ್ (೫೩) ಎಂಬಾತನನ್ನು ವಶಕ್ಕೆ ಪಡೆದಾಗ ೬ ಲಕ್ಷ ರೂ. ಮೌಲ್ಯದ ೯೭೫ ಗಾಂ ಚರಸ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಳುವಾದ ಮೊಬೈಲ್ ಪತ್ತೆ
ಪಿಐ ವಸಂತ ಆಚಾರ ಮತ್ತು ಪಿಎಸೈ ಖಾದರ್ ಭಾಷಾ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕಾರ್ಯಾಚರಣೆಯಲ್ಲಿ ಎಎಸೈ ನಿರಂಜನ ನಾಯಕ, ಸಿಬ್ಬಂದಿ ರಾಜೇಶ ಎಚ್.ನಾಯ್ಕ, ವಸಂತ ನಾಯ್ಕ, ತನೇಶ ಗಾವಡಿ (Gokarna police) ಪಾಲ್ಗೊಂಡಿದ್ದರು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case registered), ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಉಡುಪಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ