ಭಟ್ಕಳ (Bhatkal): ತಾಲೂಕಿನ ರಿಕ್ರಿಯೇಶನ್ ಕ್ಲಬ್ (Recreation club) ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ಕೈಗೆ ೮ ಜನರು ಸಿಕ್ಕಿಬಿದ್ದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಕೆ ಕಲ್ಬಂಡೆಯ ಹನುಮಂತ ಗೊಯ್ದ ನಾಯ್ಕ, ಬೆಳಕೆ ಗರಡಿಹಿತ್ಲುವಿನ ಕೇಶವ ರಾಮ ನಾಯ್ಕ ಮತ್ತು ಶ್ರೀಧರ ಮಂಜಪ್ಪ ನಾಯ್ಕ, ಹಡೀಲ ಅಂಗಡಿಮನೆಯ ವೆಂಕಟೇಶ ನಾರಾಯಣ ನಾಯ್ಕ, ಗೊರಟೆ ಕರಿಯಾಸರಮನೆಯ ಪಾಂಡು ಮಳ್ಳ ನಾಯ್ಕ, ಕುಕನೀರ ನಿವಾಸಿ ಗಣಪತಿ ಈರಪ್ಪ ನಾಯ್ಕ, ರಂಗಿಕಟ್ಟೆಯ ಸಂತೋಷ ಗೋವಿಂದ ದೇವಡಿಗ ಹಾಗೂ ಆಸರಕೇರಿಯ ನಾರಾಯಣ ಕುಪ್ಪಯ್ಯ ನಾಯ್ಕ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ : ತಾಯಿ ಜೊತೆ ಮಾತನಾಡಲು ಯಾಸಿನ್ ಭಟ್ಕಳ್ಗೆ ಅನುಮತಿ
ಬೆಳಕೆಯ ಕಲ್ಬಂಡೆಯ ಭೂಮಿಕಾ ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (Recreation club) ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಇಸ್ಪೀಟ್ ಜೂಜಾಟ ಆಡುತ್ತಿದ್ದ ೮ ಜನರ ಸಿಕ್ಕಿಬಿದ್ದಿದ್ದಾರೆ. ಕ್ಲಬ್ನ ಒಳಗಡೆ ಕೌಂಟರ್ನಲ್ಲಿ ಹಣ ಕೊಟ್ಟು, ಹಣದ ಬದಲು ಟೋಕನ್ಗಳನ್ನು ಪಡೆದು ಇಸ್ಪೀಟ್ ಆಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಚಂದನ ಗೋಪಾಲ ವಿ. ನೇತೃತ್ವದಲ್ಲಿ ದಾಳಿ ನಡೆದಿತ್ತು. ಸ್ಥಳದಲ್ಲಿ ೨೮೧೬ ರೂ. ನಗದು ಮತ್ತು ಒಂದು ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ : ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು