ಭಟ್ಕಳ (Bhatkal): ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘವು (Maruti Society) ಪ್ರಸಕ್ತ ಸಾಲಿನಲ್ಲಿ ೧೦೪.೮೫ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ರೂ.೯೬.೯೯ ಕೋಟಿ ಸಾಲವನ್ನು ನೀಡಿ ೯೮.೩೬% ಸಾಲ ವಸೂಲಾತಿಯಾಗಿದೆ. ಸುಮಾರು ೨.೪೫ ಕೋಟಿಗೂ ಮಿಕ್ಕಿ ಲಾಭಗಳಿಸಿ ಸುಧೃಢವಾಗಿದೆ ಎಂದು ಅಧ್ಯಕ್ಷ ಅಶೋಕ ಪೈ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಸಂಘದ (Maruti Society) ೨೫ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಸದಸ್ಯರಿಗೆ ೧೨% ಲಾಭಾಂಶ (dividend) ಘೋಷಿಸಿದರು. ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ ೧೩ ವರ್ಷಗಳಿಂದ ಸಂಘವು “ಅ” ದರ್ಜೆ ಪಡೆದಿದೆ. ಶಿರಸಿಯ ಶ್ರೀ ಮಾರಿಕಾಂಬಾ ವಿವಿದ್ದೋದ್ದೆಶಗಳ ಸಹಕಾರ ಸಂಘವು ನಮ್ಮ ಸಂಘದೊಂದಿಗೆ ವಿಲೀನಗೊಂಡಿದೆ. ಭಟ್ಕಳ ಶಾಖೆಯು ಅತ್ಯುತ್ತಮ ಪ್ರಗತಿ ಸಾಧಿಸಿದೆ. ಪ್ರಬಂಧಕ ಪ್ರಸನ್ನ ಪ್ರಭು ತಮ್ಮ ಅವಧಿಯಲ್ಲಿ ಸುಮಾರು ೨೨ ಕೋಟಿ ಠೇವಣಿ ಹಾಗೂ ೬ ಕೋಟಿ ಸಾಲವನ್ನು ಹೆಚ್ಚಿಸಿ ೯೯.೫೦% ಸಾಲ ವಸೂಲಾತಿಯೊಂದಿಗೆ ಶಾಖೆಗೆ ಉತ್ತಮ ಲಾಭಾಂಶವನ್ನು ತಂದುಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ : ಬೈಂದೂರು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ನಿಧನ
ಸಂಘದ ನಿರ್ದೇಶಕ ರವೀಂದ್ರ ಪ್ರಭು ಮಾತನಾಡಿ, ಶಿರಾಲಿಯಲ್ಲಿ ಸಂಘದ ಸ್ವಂತಕಟ್ಟಡ ಅತಿ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು. ನರೇಂದ್ರ ನಾಯಕ ಮಾತನಾಡಿ ಉಪಾಧ್ಯಕ್ಷ ದಿ. ಸುಬ್ರಾಯ ಕಾಮತ ಅವರು ಸಂಘಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ಸಂಘದ ಪ್ರಗತಿಗೆ ಗ್ರಾಹಕರು ನೀಡಿದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ : ಆನಂದಾಶ್ರಮ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಈ ಸಂದರ್ಭದಲ್ಲಿ ಸದಸ್ಯರಾದ ಎ. ಎಮ್. ಮುಲ್ಲಾ, ರಾಮದಾಸ ಮಹಾಲೆ, ವೆಂಕಟೇಶ ನಾಯ್ಕ, ಮಂಜುನಾಥ ಪ್ರಭು, ಶ್ರೀನಿವಾಸ ಮಹಾಲೆ, ಬೇತಾಳ ಮಹಾಲೆ, ವೆಂಕಟ್ ಭಟ್ಟ ಮುಂತಾದವರು ಸಂಘದ ಆಡಳಿತ ಮಂಡಳಿಯು ನೀಡಿದ ಪ್ರಾಮಾಣಿಕ, ನಿಸ್ವಾರ್ಥಸೇವೆ ಹಾಗೂ ಸಿಬ್ಭಂದಿ ಶ್ರಮವನ್ನು ಶ್ಲಾಘಿಸಿ, ಸಲಹೆ ಸೂಚನೆಗಳನ್ನಿತ್ತರು. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಗರಿಷ್ಠ್ಟ ಅಂಕ ಪಡೆದ ೩೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜಿನ ಇಬ್ಬರಿಗೆ ರ‍್ಯಾಂಕ್
ಸಂಘದ ಮುಖ್ಯ ಕಾರ್ಯ ನಿರ್ವಾಹಕ ರಾಜೇಂದ್ರ ಶಾನಭಾಗ ವರದಿ ವಾಚಿಸಿದರು. ಸಭೆಯ ಪ್ರಾರಂಭದಲ್ಲಿ ಸಂಘದ ಉಪಾಧ್ಯಕ್ಷರಾಗಿದ್ದ ದಿ. ಸುಬ್ರಾಯ ಕಾಮತ ಇವರಿಗೆ ಪುಷ್ಪ ನಮನದೊಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಿರ್ದೇಶಕ ವಾಮನ ಕಾಮತ ವಂದಿಸಿದರು. ಸಿಬ್ಬಂದಿ ಶ್ಯಾಮಸುಂದರ ಪ್ರಭು ಪ್ರಾರ್ಥಿಸಿದರು. ಭಟ್ಕಳ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ನಿರ್ವಹಿಸಿದರು.
ಇದನ್ನೂ ಓದಿ : ರಿಕ್ರಿಯೇಶನ್ ಕ್ಲಬ್ ಮೇಲೆ ದಾಳಿ; ೮ ಜನರು ವಶಕ್ಕೆ