ಯಲ್ಲಾಪುರ (Yallapur): ಅತಿವೇಗದ ಚಾಲನೆಯ ಸ್ವಯಂಕೃತ ಅಪರಾಧದಿಂದ ಓಮಿನಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾನೆ (Life threat).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಲ್ಲಾಪುರ ತಾಲೂಕಿನ ಒಂಟಮನೆ ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಅಪಘಾತ (accident) ಸಂಭವಿಸಿದೆ. ಮಹಾರಾಷ್ಟ್ರದ (Maharashtra) ಸಾಂಗ್ಲಿಯ (Sangli) ಯುವರಾಜ ಪುರುಷೋತ್ತಮ ಗೌಳಿ (೩೮) ಮೃತ ವ್ಯಕ್ತಿ (Life threat). ನಿನ್ನೆ ಸೆ.೨೯ರಂದು ಸಂಜೆ ೪ ರ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಅತಿವೇಗದಿಂದ ಬಂದ ಓಮಿನಿ ಚಾಲಕನ ನಿಯಂತ್ರಣ ತಪ್ಪಿ, ಬಲಬದಿಗೆ ಬಂದು, ರಸ್ತೆಯ ಪಕ್ಕದಲ್ಲಿದ್ದ ಕಬ್ಬಿಣದ ಸಿಗ್ನಲ್ ಪೈಪಿಗೆ ಡಿಕ್ಕಿ ಹೊಡೆದಿದೆ. ನಂತರ ಕಚ್ಚಾ ರಸ್ತೆ ದಾಟಿ ಅರಣ್ಯದಲ್ಲಿಯ ಒಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ವಾಹನದಿಂದ ಹೊರಬಿದ್ದ ಚಾಲಕಗೆ ಕುತ್ತಿಗೆಯ ಭಾಗದಲ್ಲಿ ಗಾಯವಾಗಿತ್ತು.
ಇದನ್ನೂ ಓದಿ : Honavar TP Veeragrani/ ಆರ್ಡಿಪಿಆರ್ ಕ್ರೀಡಾಕೂಟಕ್ಕೆ ತೆರೆ
ತಕ್ಷಣ ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯ ಮೃತಪಟ್ಟಿರುವುದಾಗಿ ದೂರು ದಾಖಲಾಗಿದೆ. ಮೃತನ ಸಹೋದರನ ಮಗ ನಾಗರಾಜ ಸಂಗಪ್ಪ ರೆಡ್ಡಿ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ(Case Registered). ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : Youth arrest/ ಗಾಂಜಾ ಸೇವಿಸಿದ ಕಾರವಾರದ ಯುವಕ ಸೆರೆ