ಭಟ್ಕಳ (Bhatkal): ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಲ್ಲಿ ಇಡೀ ಪರಿಸರವೇ ಸ್ವಚ್ಚವಾಗಿರುವುದು. ಕಳೆದ ಸೆ.೧೭ರಿಂದಲೇ ಸ್ವಚ್ಚತಾ ಹೀ ಸೇವಾ  ಅಭಿಯಾನದಡಿಯಲ್ಲಿ (Swachatha hi seva) ವಿವಿಧ ಕಡೆಗಳಲ್ಲಿ ಸ್ವಚ್ಚತೆಯ ಕುರಿತು ತಿಳಿ ಹೇಳುವ ಕಾರ್ಯ ನಡೆಯುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ಕರೆ ನೀಡಿದರು. ಅವರು ನ್ಯಾಯಾಂಗ ಇಲಾಖೆ, ವಕೀಲರ ಸಂಘ, ತಾಲೂಕಾ ಕಾನೂನು ಸೇವಾ ಸಮಿತಿ, ಪುರಸಭೆ ಭಟ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ಮಾತನಾಡಿ, ಸ್ವಚ್ಚತಾ ಹೀ ಸೇವಾ ಅಭಿಯಾನದಡಿಯಲ್ಲಿ (Swachatha hi seva) ನ್ಯಾಯಾಲಯದ ಆವರಣ ಸ್ವಚ್ಚತೆಗೆ ಸಹಕರಿಸಿದ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಹಕಾರವನ್ನು ಸ್ಮರಿಸಿದರು. ಹಿರಿಯ ನ್ಯಾಯವಾದಿ, ನೋಟರಿ ಆರ್.ಆರ್.ಶ್ರೇಷ್ಟಿ ಮಾತನಾಡಿ, ಸ್ವಚ್ಚತಾ ಹೀ ಸೇವಾ ಶಬ್ದವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ನಮ್ಮ ಪರಿಸರ ಮಾತ್ರವಲ್ಲ, ನಮ್ಮ ಅಕ್ಕಪಕ್ಕದ ಪ್ರದೇಶಗಳನ್ನು ಕೂಡ ಸ್ವಚ್ಚಗೊಳಿಸುವ ಕಾರ್ಯ ಮಾಡುವ ಕೆಲಸ ನಾವು ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ : ಪರ್ತಗಾಳಿ ಶ್ರೀಗಳ ದಿಗ್ವಿಜಯ ಮಹೋತ್ಸವ ಸಂಪನ್ನ

ಬೆಳಿಗ್ಗೆ ೮ ಗಂಟೆಯಿಂದಲೇ ನ್ಯಾಯಾಲಯದ ಆವರಣದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರು, ಪುರಸಭಾ ಸಿಬ್ಬಂದಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು. ನಂತರ ಕೈಜೋಡಿಸಿದ ವಕೀಲರ ಸಂಘ, ನ್ಯಾಯಾಂಗ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯರುಗಳು ಕಾರ್ಯಾಚರಣೆಯಲ್ಲಿ ಸೇರಿಕೊಂಡರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಧನವತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಜಿ.ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯ್ಕ, ಸಹ ಕಾರ್ಯದರ್ಶಿಯಾಗಿ ನಾಗರತ್ನ ನಾಯ್ಕ, ವಕೀಲರಾದ ಮಹೇಶ ನಾಯ್ಕ, ದುರ್ಗೇಶ ವೈದ್ಯ, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಉಪಸ್ಥಿತರಿದ್ದರು. ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸ್ವಾಗತಿಸಿ, ವಂದಿಸಿದರು.

ಇದನ್ನೂಓದಿ : ಸೆಪ್ಟೆಂಬರ್‌ ೩೦ರಂದು ವಿವಿಧೆಡೆ ಅಡಿಕೆ ಧಾರಣೆ