ಭಟ್ಕಳ (Bhatkal): ಕರಾವಳಿ ಕಾವಲು ಪಡೆ (coastal guard) ಪೊಲೀಸರು ಸಮುದ್ರ ಮೂಲಕ ನುಸುಳಿಕೊಂಡು ಬರುತ್ತಿದ್ದ ಆರು ಜನ ನಕಲಿ ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ ೧.೩೦ರ ಸುಮಾರಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆ! ಏನಿದು ಎಂದು ನೀವು ಆತಂಕಪಡುವ ಮುನ್ನವೇ, ಇದೊಂದು ಅಣಕು ಕಾರ್ಯಾಚರಣೆ (mock operation) ಎಂಬುದನ್ನು ನಾವು ತಿಳಿಸಿ ಹೇಳಿ ಬಿಡುತ್ತೇವೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ ಕರಾವಳಿಯಲ್ಲಿ ನಡೆಯುವ ಸಾಗರ ಕವಚ ಅಣಕು ಕಾರ್ಯಾಚರಣೆಯ (mock operation) ಸನ್ನಿವೇಶವಿದು. ಕರಾವಳಿ ಭಾಗದಲ್ಲಿ ರಕ್ಷಣೆ ಮತ್ತು ಭದ್ರತೆ ಕುರಿತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅ.೧೬ ಮತ್ತು ೧೭ರಂದು ರಕ್ಷಣಾ ವ್ಯವಸ್ಥೆಯ ಅಣಕು ಪ್ರದರ್ಶನ ‘ಸಾಗರ ಕವಚ’ ವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ರಾಜ್ಯದ ಕರಾವಳಿ ಕಾವಲು ಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು
ಇದನ್ನೂ ಓದಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನಾದ್ಯಂತ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ ತಪಾಸಣೆ ಮಾಡುತ್ತಿದ್ದ ವೇಳೆ ಸಮುದ್ರ ಮಾರ್ಗದಿಂದ ನುಸುಳುತ್ತಿದ್ದ ೬ ಜನ ನಕಲಿ ಭಯೋತ್ಪಾದಕರನ್ನು ಭಟ್ಕಳ ಕರಾವಳಿ ಪೊಲೀಸರು ಗುವರುವಾರ ಬೆಳಗಿನ ಜಾವ ೧.೩೦ ರ ಸುಮಾರಿಗೆ ಬಂಧಿಸಿದ್ದಾರೆ.
ಇದನ್ನೂ ಓದಿ : ಭಟ್ಕಳದಿಂದ ಕರ್ನಾಟಕ ಸಂಭ್ರಮ ೫೦ರ ಜ್ಯೋತಿ ರಥಯಾತ್ರೆ ಆರಂಭ
ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್.ಎನ್., ಭಟ್ಕಳ ಸಿ.ಎಸ್.ಪಿ. ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, KND, ಮತ್ತು ತಾಂತ್ರಿಕ ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ : ಅ.೨೦ರಂದು ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್
ಅಣಕು ಕಾರ್ಯಾಚರಣೆ ಹೇಗಿರುತ್ತೆ?:
ಮುಂಬೈ ದಾಳಿಯ ಬಳಿಕ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ‘ರೆಡ್ ಫೋರ್ಸ್ ಹಾಗೂ ಬ್ಲೂ ಫೋರ್ಸ್’ ಎಂದು ಎರಡು ಗುಂಪುಗಳನ್ನು ಮಾಡಲಾಗಿದೆ. ‘ರೆಡ್ ಫೋರ್ಸ್’ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಲಾಗುತ್ತದೆ. ‘ಬ್ಲೂ ಪೋರ್ಸ್’ನ ಪೊಲೀಸ್ ಸಿಬ್ಬಂದಿ ಅದನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ.
ಇದನ್ನೂ ಓದಿ : ಅಕ್ಟೋಬರ್ ೧೬ರಂದು ವಿವಿಧೆಡೆ ಅಡಿಕೆ ಧಾರಣೆ