ಭಟ್ಕಳ (Bhatkal): ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ (Murudeshwar) ಗೂಡಂಗಡಿಕಾರರು ಮತ್ತು ಆಟೋ ಚಾಲಕ-ಮಾಲಕರ ನಡುವೆ ಶೀತಲ ಸಮರ (Cold war) ಆರಂಭವಾಗಿದೆ. ಗೂಡಂಗಡಿ ತೆರವು ಮಾಡುವಂತೆ ಆಟೋ ಚಾಲಕ-ಮಾಲಕರು ಆಗ್ರಹಿಸಿರುವ ಬೆನ್ನಲ್ಲೇ ತಳ್ಳುಗಾಡಿ ಅಂಗಡಿಕಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಟೋ ರಿಕ್ಷಾಗಳಿಂದ ಆಗುತ್ತಿರುವ ಅನಾನುಕೂಲತೆ ಬಗ್ಗೆ ಉತ್ತರ ಕನ್ನಡ (uttara kannada) ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುರ್ಡೇಶ್ವರ ಠಾಣೆಗೆ ಮನವಿ ನೀಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರದಲ್ಲಿ (Murudeshwar) ಟ್ರಾಫಿಕ್ ಸಮಸ್ಯೆ ಇದ್ದರೂ ಕೂಡ ರಿಕ್ಷಾದವರು ತಮ್ಮ ಮನಸ್ಸಿಗೆ ಇಚ್ಛೆ ಬಂದಂತೆ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ೪ ರಿಕ್ಷಾ ಸ್ಟ್ಯಾಂಡ್ ಮಾಡಿಕೊಂಡು ಮುರ್ಡೇಶ್ವರಕ್ಕೆ (Murdeshwar) ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಬಾಡಿಗೆ ಹಣದ ಹೆಚ್ಚುವರಿ ವಸೂಲಿ ಮಾಡುವ ಬಗ್ಗೆ ಪ್ರವಾಸಿಗರ ಜೊತೆ ಮಾತಿಗೆ ಮಾತು ಬೆಳೆದು ಅವರ ಮೇಲೆ ಹೊಡೆದಾಡುತ್ತಿದ್ದಾರೆ. ಮುರ್ಡೇಶ್ವರ ಗೇಟ್‌ನಿಂದ ದೇವಸ್ಥಾನಕ್ಕೆ ಹೋಗುವ ತನಕ ಮೀಟರ್ ಇಲ್ಲದೇ ಮನಸ್ಸಿಗೆ ಬಂದಂತೆ ಹಣ ಪಡೆಯುತ್ತಿದ್ದಾರೆ. ಹಾಗೆಯೇ ರಾತ್ರಿ ವೇಳೆ ಮೂರು ಪಟ್ಟು ಜಾಸ್ತಿ ಹಣವನ್ನು ಪಡೆಯುತ್ತಿದ್ದಾರೆ. ೩ ಸೀಟ್‌ ಕ್ಕಿಂತ ಹೆಚ್ಚಿನ ಸೀಟ್ ಹಾಕಿಕೊಂಡು ಬಾಡಿಗೆ ಹೊಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ :   ಉ.ಕ. ಜಿಲ್ಲೆಯಲ್ಲಿ ರಥಯಾತ್ರೆ ಆರಂಭ

ರಿಕ್ಷಾ ಯೂನಿಯನ್ ಅವರು ಯಾವುದೇ ಪರವಾನಗಿ ಇಲ್ಲದೇ ಪುರಾಣ ಪ್ರಸಿದ್ಧ ಕಲ್ಯಾಣಿ ಪಕ್ಕದಲ್ಲಿ ಶೆಡ್ ಹಾಕಿಕೊಂಡಿದ್ದಾರೆ. ಮುರ್ಡೆಶ್ವರದಲ್ಲಿ ಅರ್ಧ ಕಿಲೋಮೀಟರ್ ಒಳಗೆ ೪ ರಿಕ್ಷಾ ಸ್ಟ್ಯಾಂಡ್‌ಗಳಿವೆ. ಇವುಗಳಿಗೆ ಸರ್ಕಾರದಿಂದ ಯಾವುದೇ ಪರವಾನಗಿ ಇರುವುದಿಲ್ಲ. ಹಾಗೆಯೇ ನಿಯಮದ ಪ್ರಕಾರ ರಿಕ್ಷಾದವರು ೩ ಕಿಲೋಮೀಟರ್ ಒಳಗೆ ಬಾಡಿಗೆ ಹೊಡಿಯಬೇಕು ಎನ್ನುವ ನಿಯಮವಿದ್ದರೂ ಅದನ್ನು ಮೀರಿ ಅವರು ೭ ಕಿಲೋಮೀಟರ್ ಹೊರಗಡೆ ಅಂದರೆ ಕುಮಟಾ, ಗೋಕರ್ಣ, ಇಕೋ ಬೀಚ್, ಹೊನ್ನಾವರದಂತಹ ಬೇರೆ ಬೇರೆ ತಾಲೂಕಿಗಳಿಗೆ ಬಾಡಿಗೆ ಹೊಡೆಯುತ್ತಿದ್ದಾರೆ ಎಂದು ತಳ್ಳಗಾಡಿಯವರು ಆರೋಪಿಸಿದ್ದಾರೆ.

ಇದನ್ನೂ ಓದಿ :  ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಬಾಡಿಗೆ ಹೊಡೆಯುವ ಸಮಯದಲ್ಲಿ ಯಾರೂ ಕೂಡ ಸಮವಸ್ತ್ರ ಧರಿಸಿರುವುದಿಲ್ಲ.  ಸರಿ ಸುಮಾರು ೨೦ ವರ್ಷದಿಂದ ಅಂಗಡಿ ಮುಂಗಟ್ಟುಗಳನ್ನು ಇಟ್ಟು ವ್ಯಾಪಾರ ನಡೆಸುವವರಿದ್ದಾರೆ. ಅವರ ಅಂಗಡಿಗಳನ್ನು ತೆರವುಗೊಳಿಸಿ ಅಲ್ಲಿಯೂ ಕೂಡ ರಿಕ್ಷಾ ಸ್ಟ್ಯಾಂಡ್ ಮಾಡಲು – ಅಂಗಡಿಯವರಿಗೆ ತೊಂದರೆ ಕೊಡುತ್ತಿದ್ದಾರೆ. ರಿಕ್ಷಾ ಯೂನಿಯನ್ ಹೆಸರಿನಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದಾರೆ. ಅದನ್ನು ಖುಲ್ಲಾಪಡಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಯಲ್ಲಿ ಆಟೋಗಳ ವಿರುದ್ಧ ಆರೋಪಗಳ ಸುರಿಮಳೆಗೈಯಲಾಗಿದ್ದು, ಇವರ ಶೀತಲ ಸಮರ (Cold War) ಸ್ಥಳೀಯಾಡಳಿತ ಹೇಗೆ ನಿಭಾಯಿಸುತ್ತೋ ಕಾದುನೋಡಬೇಕಿದೆ.

ಇದನ್ನೂ ಓದಿ :  ಅತಿಕ್ರಮಿತ ಚರಂಡಿ, ಪಾದಚಾರಿ ಮಾರ್ಗ ತೆರವಿಗೆ ಆಗ್ರಹ