ಭಟ್ಕಳ (Bhatkal): ಶೌಚಾಲಯವಿದ್ದರೂ ಶೌಚದ ಗುಂಡಿಯಿಲ್ಲ (toilet pit). ಪರಿಸರದಲ್ಲಿ ಹರಿಯುವ ತ್ಯಾಜ್ಯ ನೀರು ಅನೈರ್ಮಲ್ಯಕ್ಕೆ (unsanitary) ದಾರಿ. ಪುಟಾಣಿ ಮಕ್ಕಳ ಅನಾರೋಗ್ಯಕ್ಕೆ ರಹದಾರಿ ಆಗುವ ಆತಂಕ. ಸೊಳ್ಳೆ, ಕ್ರಿಮಿಕೀಟಗಳು ಉತ್ಪತ್ತಿಯಾಗಿ ರೋಗರುಜಿನಗಳು ಹರಡುವ ಭಯ….

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇದು, ಹೆಬ್ಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ ಅಂಗನವಾಡಿಯ (anganavadi) ದುಸ್ಥಿತಿ. ಇದನ್ನು ಮನಗೊಂಡ ಬೈಲೂರು ನಿವಾಸಿ ಉದ್ಯಮಿ ಮಾಸ್ತಪ್ಪ ನಾಯ್ಕ ಆರ್ಥಿಕ ಧನ ಸಹಾಯ ಮಾಡುವ ಮೂಲಕ ಶೌಚದ ಗುಂಡಿ ನಿರ್ಮಾಣಕ್ಕೆ ನೆರವಾಗಿದ್ದಾರೆ.

ಇದನ್ನೂ ಓದಿ :  ಅಂಜುಮನ್‌ ಕಾಲೇಜು ಬಳಿ ಗಾಂಜಾ ಮಾರಾಟ !

ಈ ಅಂಗನವಾಡಿಯಲ್ಲಿ ಶೌಚದ ಗುಂಡಿ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ಸಿಕ್ಕಿದ್ದು ಕೇವಲ ಭರವಸೆ. ಶೌಚದ ಗುಂಡಿ ನಿರ್ಮಿಸಿ ಕೊಡುತ್ತೇವೆಂದು ಹೇಳಿ ಸುಮ್ಮನಾಗುತ್ತಿದ್ದರು. ಬಳಿಕ ಸ್ಥಳೀಯ ಯುವಕ ವಿಶ್ವ ನಾಯ್ಕ ತಮ್ಮ ಆಪ್ತರಾದ ಮಾಸ್ತಪ್ಪ ನಾಯ್ಕ ಅವರನ್ನು ಸಂಪರ್ಕಿಸಿ ತಮ್ಮೂರಿನಲ್ಲಿರುವ ಅಂಗನವಾಡಿಯ ಸಮಸ್ಯೆಯನ್ನು ಹೇಳಿಕೊಂಡರು.

ಇದನ್ನೂ ಓದಿ : ಪತ್ತೆ ಕಾರ್ಯಾಚರಣೆ ಮುಂದುವರಿಸಲು ಒತ್ತಾಯ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾಸ್ತಪ್ಪ ನಾಯ್ಕ ೨೫೦೦೦ ರೂಪಾಯಿ ಹಣವನ್ನು ಸ್ಥಳೀಯರಾದ ವೆಂಕಟೇಶ ನಾಯ್ಕ ಅವರ ಖಾತೆಗೆ ವರ್ಗಾಯಿಸಿದ್ದಾರೆ. ಶೌಚದ ಗುಂಡಿ ನಿರ್ಮಾಣಕ್ಕೆ ನೆರವಾಗುವ ಮೂಲಕ ಅನೈರ್ಮಲ್ಯಕ್ಕೆ (unsanitary) ಮುಕ್ತಿ ಹಾಡಿದ್ದಾರೆ. ಇದಕ್ಕೆ ವೆಂಕಟೇಶ ನಾಯ್ಕ, ಗಣಪತಿ ನಾಯ್ಕ, ರಾಘು ನಾಯ್ಕ, ನವೀನ ನಾಯ್ಕ, ದಿನೇಶ ನಾಯ್ಕ ಮುಂತಾದವರು ಸಹಕರಿಸಿದ್ದಾರೆ.

ಇದನ್ನೂ ಓದಿ : ಮದುವೆ ಮನೆಯಲ್ಲಿ ಜಗಳ; ಮೂವರಿಂದ ಹಲ್ಲೆ