ಭಟ್ಕಳ: ನಗರದ ನಾಮಧಾರಿ ಗುರುಮಠ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುಂಡಳ್ಳಿಯ ಬ್ರಾಹ್ಮಿ ಮಹಿಳಾ ಭಜನಾ ಕುಣಿತ ತಂಡವನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ವಾರದ ಸಂತೆ ಮೀರಿಸಿದ ಮಕ್ಕಳ ಸಂತೆ
ಶ್ರೀ ದೇವರ ಪಲ್ಲಕಿ ಉತ್ಸವದ ಮೆರವಣಿಗೆಯಲ್ಲಿ ಸತತ 8 ಗಂಟೆಗೂ ಅಧಿಕ ಸಮಯ ಈ ಭಜನಾ ತಂಡ ಕುಣಿತ ಪ್ರದರ್ಶಿಸಿತ್ತು. ಮಹಿಳೆಯರ ಈ ಸಾಧನೆ ಭಕ್ತರ ಪ್ರಶಂಸೆಗೆ ಕಾರಣವಾಗಿತ್ತು.
ಈ ವಿಡಿಯೋ ನೋಡಿ : ಹೀಗಿರುತ್ತೆ ನೋಡಿ ಹರ್ದಿನ ಕುಣಿತ https://fb.watch/qkG9NrTBSs/?mibextid=Nif5oz
ನಾಮಧಾರಿ ಗುರುಮಠ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ ರವರು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಕುಣಿತ ತಂಡದ ನಾಯಕಿ ಯಮುನಾ ದಿನೇಶ ನಾಯ್ಕ ಹಾಗೂ ಸದಸ್ಯರನ್ನು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗುರುಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಕಾರ್ಯದರ್ಶಿ ಡಿ.ಎಲ್.ನಾಯ್ಕ, ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಸದಸ್ಯರಾದ ಕೆ.ಆರ್. ನಾಯ್ಕ, ಪ್ರಕಾಶ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಯುವಕ ಸಂಘದ ಅಧ್ಯಕ್ಷ ವಸಂತ ನಾಯ್ಕ ಮತ್ತಿತರರು ಇದ್ದರು.