ಭಟ್ಕಳ (Bhatkal) : ೨೦೨೩ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ (Academy award) ಪುರಸ್ಕೃತರಾಗಿ ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತ ಕಲಾವಿದರಾದ ಭಟ್ಕಳದ ಈರಯ್ಯ ಮೊಗೇರ ಬೇಡುಮನೆ ಆಯ್ಕೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರಿನ್ಮನೆ ಮತ್ತು ಹೌಂದೇರಾಯನ ಕುಣಿತದಲ್ಲಿ ಈರಯ್ಯ ಮೊಗೇರ ಅವರದ್ದು ಎತ್ತಿದ ಕೈ. ಕಳೆದ ೫೦ ವರ್ಷಗಳಿಂದ ಈ ಕುಣಿತದಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ವಂಶಪಾರಂಪರಿಕವಾಗಿ ಬಂದಿರುವ ಈ ವಿಶಿಷ್ಟ ಕಲಾಪ್ರಕಾರ (folk art) ಉಳಿಸಿ, ಬೆಳೆಸುವಲ್ಲಿ ಅವರ ಕೊಡುಗೆ ಮಹತ್ತರವಾದದ್ದು. ಜಾನಪದ ಅಕಾಡೆಮಿ ಪ್ರಶಸ್ತಿಗೆ (Academy award) ಆಯ್ಕೆಯಾಗಿರುವ ರಾಜ್ಯದ ೩೦ ಕಲಾವಿದರಲ್ಲಿ ಈರಯ್ಯ ಮೊಗೇರ ಒಬ್ಬರು.
ವಿಡಿಯೋ ಸಹಿತ ಇದನ್ನೂ ಓದಿ : ವಕ್ಫ್ ಬೋರ್ಡ್ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
ಹೌಂದೇರಾಯನ ಕುಣಿತ ಮೂಲತಃ ತುಳಸಿ ಪೂಜೆಯ ಸಂದಭ೯ದಲ್ಲಿ ದೇವಾರಾಧನೆಯ ಭಾಗವಾಗಿ ಜನಪ್ರಿಯ ಕಲಾಪ್ರಕಾರ. ಉಡುಪಿ (Udupi) ಜಿಲ್ಲೆಯ ಕುಂದಾಪುರ (Kundapur) ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ಸೇರಿದಂತೆ ಕರಾವಳಿಯ (coastal) ಪ್ರದೇಶದಲ್ಲಿ ಈ ನೃತ್ಯಾರಾಧನೆ ಹೆಚ್ಚು ಪ್ರಸಿದ್ಧಿ. ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಕಲಾಪ್ರಕಾರವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಅವಸಾನದ ಅಂಚಿನಲ್ಲಿದ್ದರೂ ಅಲ್ಲಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆಯಲ್ಲಿದೆ.
ಇದನ್ನೂ ಓದಿ : ಭುವನೇಶ್ವರಿಗೆ ಅಗೌರವ; ಕಸಾಪ ಖಂಡನೆ
ಕಡಲಮಕ್ಕಳ ಒಡನಾಳ ಭಕ್ತಿ, ಆರಾಧನೆ ಸಮಪ೯ಣೆ ಮತ್ತು ಸದಾಶಯದ ಮಾಧ೯ನ ಮಿಶ್ರಣವೇ ಈ ಜನಪದ ನೃತ್ಯ -ಗೀತೆಯ ತಿರುಳು. ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ಭಾವಪರವಶರಾಗಿ ಹಾಡುತ್ತಾ ಭಾವುಕ ಸನ್ನಿವೇಶಗಳನ್ನು ಸೃಷ್ಟಿಸುವ ಅಪೂವ೯ ಕಲಾವಂತಿಗೆ ಇದರಲ್ಲಿ ಅಡಗಿದೆ. ಹಿನ್ನಲೆಗಾಯನ ಮತ್ತು ವಾದ್ಯವೃಂದವಿಲ್ಲದೆ ಆಡುಮಾತಿನ ಸೊಗಡಿನೊಂದಿಗೆ ತಾವೇ ಹಾಡುತ್ತಾ ಕುಣಿಯುದೇ ಈ ನೃತ್ಯದ ವಿಶೇಷತೆ.
ಕುಂದಾಪುರ ಭಾಗದಲ್ಲಿ ಈ ಕುಣಿತಕ್ಕೆ ಹೌಂದೇರಾಯನ ಕುಣಿತ, ಹೌಂದೇರಾಯನ ಓಲಗ ಎಂದು ಕರೆದರೆ, ಭಟ್ಕಳದಲ್ಲಿ ಹರ್ದಿನ ಕುಣಿತ, ಹರಿ ಕುಣಿತ ಎಂದೆಲ್ಲ ಕರೀತಾರೆ. ಭಟ್ಕಳ ಭಾಗದ ಕುಣಿತಕ್ಕೂ, ಕುಂದಾಪುರ ಭಾಗದ ಕುಣಿತಕ್ಕೂ ವ್ಯತ್ಯಾಸವಿದೆ. ಈ ಕುಣಿತ ಹೇಗಿರುತ್ತೆ ಗೊತ್ತಾ? ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ !