ಭಟ್ಕಳ (Bhatkal) : ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ಧಾರ್ಮಿಕ ಶ್ರದ್ದಾಕೇಂದ್ರ, ವ್ಯಾಪಾರ ವಹಿವಾಟು ಕೇಂದ್ರಗಳ ಮೇಲಿನ ದಾಳಿ, ಲೂಟಿ, ಹತ್ಯೆ, ಹಲ್ಲೆ ಹಾಗೂ ಹಿಂದೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯ (Bangladesh riots) ಖಂಡಿಸಿ ಡಿಸೆಂಬರ್ ೧೩, ಶುಕ್ರವಾರದಂದು ಸಂಜೆ ೪ ಗಂಟೆಗೆ ಪ್ರತಿಭಟನೆ ನಡೆಯಲಿದೆ. ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆ ಹಾಗೂ ಭಟ್ಕಳ ಸಮಸ್ತ ಹಿಂದು ಸಮಾಜದ ಸಹಭಾಗಿತ್ವದಲ್ಲಿ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಭಟ್ಕಳ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ರಾಮಕೃಷ್ಣ ನಾಯ್ಕ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಅವರು ಶಹರದ ದಂಡಿನ ದುರ್ಗಾ ದೇವಸ್ಥಾನದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ‘ಭಾರತದ ನೆರೆಯ ದೇಶ ಮತ್ತು ನಾವೇ ನಿರ್ಮಿಸಿಕೊಟ್ಟಂತಹ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ೪ ತಿಂಗಳಿನಿಂದ ನಿರಂತರ ದಾಳಿ, ಹಲ್ಲೆಗಳು (Bangladesh riots) ನಡೆಯುತ್ತಿವೆ. ಅಲ್ಲಿನ ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ, ಅಲ್ಲಿನ ಹಿಂದು ದೇವಾಲಯಗಳ ಮೇಲೆ ದಾಳಿ ಮತ್ತು ಧ್ವಂಸಗಳಂತಹ ಕೃತ್ಯಗಳನ್ನು ಅಲ್ಲಿನ ಮುಸ್ಲಿಂ ಸಮುದಾಯ ನಡೆಸುತ್ತಿವೆ. ಹಿಂದುಗಳನ್ನು ಕಂಡಕಂಡಲ್ಲಿ ದಾಳಿ ನಡೆಸಿ ಅವರನ್ನು ಹತ್ಯೆ ನಡೆಸುತ್ತಿದ್ದಾರೆ. ಇನ್ನು ಬಾಂಗ್ಲಾ ಇಸ್ಕಾನ್ (ISCON) ದೇವಾಲಯದ ಮುಖ್ಯಸ್ಥ ಹಾಗೂ ಸನ್ಯಾಸಿ ಚಿನ್ಮಯ ಕೃಷ್ಣದಾಸ ಅವರು ಅಲ್ಲಿನ ಕೇಸರಿ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡಿದ ಹಿನ್ನೆಲೆ ಅಕ್ರಮವಾಗಿ ಅಲ್ಲಿನ ಸರಕಾರ ಅವರನ್ನು ಬಂಧಿಸಿದೆ. ಈ ಎಲ್ಲಾ ಘಟನೆಗಳನ್ನು ಖಂಡಿಸಿ ಅಲ್ಲಿನ ಹಿಂದುಗಳ ಪರವಾಗಿ ನಿಲ್ಲುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಇದನ್ನೂ ಓದಿ : ನಾಳೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ
ಇಲ್ಲಿನ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ವಿನಾಯಕ ರಂಗ ಮಂಟಪದಿಂದ ಹೂವಿನಪೇಟೆ ರಸ್ತೆ, ಮುಖ್ಯ ಪೇಟೆ ರಸ್ತೆಯಿಂದ ಮಾರಿಗುಡಿ ದೇವಸ್ಥಾನದ ಮಾರ್ಗವಾಗಿ ಭಟ್ಕಳ ಮುಖ್ಯ ಸರ್ಕಲ ತನಕ ಬಂದು, ಅಲ್ಲಿಂದ ಹಳೆ ಬಸ್ ನಿಲ್ದಾಣದ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ವೇದಿಕೆಯ ತನಕ ಶಾಂತಿಯುತ ಬೃಹತ ಮೆರವಣಿಗೆ ನಡೆಯಲಿದೆ. ನಂತರ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ರಾಜಶೇಖರಾನಂದ ವಜ್ರದೇಹಿ ಸಂಸ್ಥಾನದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದ್ದು, ಅಧ್ಯಕ್ಷತೆಯನ್ನು ಭಟ್ಕಳ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ, ಹಿಂದು ಮುಖಂಡ ಗೋವಿಂದ ಎನ್. ಖಾರ್ವಿ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ : ಓಸಿ ಆಡಿಸುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ
ಅಂದು ಸಂಜೆ ತಾಲೂಕಿನ ಸಮಸ್ತ ಹಿಂದು ಸಮಾಜ ಬಾಂಧವರು ಮಧ್ಯಾಹ್ನ ನಂತರ ತಮ್ಮೆಲ್ಲ ವ್ಯಾಪಾರ-ವಹಿವಾಟು, ಕೆಲಸ ಕಾರ್ಯಗಳನ್ನು ಸ್ವಯಂಪ್ರೇರಣೆಯಿಂದ ಸ್ಥಗಿತಗೊಳಿಸಿ ಸಂಘಟಿತ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಈ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಸಹ ಭಾಗವಹಿಸಲಿದ್ದು ಬಾಂಗ್ಲಾದೇಶದಲ್ಲಿನ ಹಿಂದುಗಳ ದೌರ್ಜನ್ಯ ಖಂಡಿಸಿ ಅವರಿಗೆ ಧ್ವನಿಯಾಗಬೇಕು ಎಂದು ವಿನಂತಿಸಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಐದು ದಿನಗಳ ಕಾಲ ಎಕ್ಸ್ಪೋ
ತಾಲೂಕಿನ ಸುಮಾರು ೩೦ಕ್ಕೂ ಅಧಿಕ ವಿವಿಧ ಹಿಂದು ಸಮಾಜದ ಮುಖಂಡರನ್ನು ಸಂಪರ್ಕಿಸಲಾಗಿದೆ. ಎಲ್ಲ ಸಮಾಜವು ಈ ಮೆರವಣಿಗೆಗೆ ಬೆಂಬಲ ಸೂಚಿಸಿದ್ದಾರೆ. ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೂಚನೆಯ ಮೇರೆಗೆ ಬೈಲೂರಿನಿಂದ ಗೊರಟೆಯ ತನಕ ನಿರ್ದಿಷ್ಟ ಹಂತದಲ್ಲಿ ಬೈಠಕ್ ನಡೆಯುತ್ತಿದ್ದು, ಸಮಸ್ತ ಹಿಂದು ಸಮಾಜವು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ವಿಷಯದ ಕುರಿತಾಗಿ ಜಿಲ್ಲೆಯ ಶಿರಸಿ (Sirsi) ಮತ್ತು ಕಾರವಾರದಲ್ಲಿ (Karwar) ಸಾಂಕೇತಿಕವಾಗಿ ಮನವಿ ನೀಡಲಾಗಿದೆ. ಜಿಲ್ಲೆಯಲ್ಲಿ ಭಟ್ಕಳದಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಉಳಿದ ತಾಲ್ಲೂಕಿನಿಂದ, ಪಕ್ಕದ ಶಿರೂರಿನಿಂದ ಹಿಂದು ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದನ್ನೂ ಓದಿ : ಕಳೆದುಹೋಗಿದ್ದ ಮೊಬೈಲ್ ಪತ್ತೆ
ಸುದ್ದಿಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ಸಂಯೋಜಕ ಮತ್ತು ಕಾರ್ಯಕ್ರಮದ ಸಹ- ಸಂಚಾಲಕ ಜಯಂತ ನಾಯ್ಕ ಬೆಣಂದೂರು, ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷರಾದ ಗೋವಿಂದ ಖಾರ್ವಿ ಮತ್ತು ಭಾಸ್ಕರ ಆಚಾರ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶಿವಾನಂದ ದೇವಾಡಿಗ, ಭಜರಂಗ ದಳದ ಸಂಯೋಜಕ ದೀಪಕ ನಾಯ್ಕ, ವಿಶ್ವ ಹಿಂದು ಪರಿಷತ್ ಸದಸ್ಯ ಮೋಹನ ಶಿರಾಲಿಕರ, ರಾಮನಾಥ ಬಳಗಾರ, ಹಿಂದು ಜಾಗರಣ ವೇದಿಕೆ ಭಟ್ಕಳ ತಾಲ್ಲೂಕು ಸಹ ಸಂಚಾಲಕರಾದ ನಾಗೇಶ ನಾಯ್ಕ, ಕುಮಾರ ನಾಯ್ಕ ಮತ್ತು ರಾಘವೇಂದ್ರ ನಾಯ್ಕ, ಹಿಂದು ಸಂಘಟನೆ ಮುಖಂಡರಾದ ಶ್ರೀಕಾಂತ ನಾಯ್ಕ, ಪ್ರಮೋದ ಜೋಶಿ, ಮಹಾಲೆ ಸಮಾಜದ ಮುಖಂಡ ಜಗದೀಶ ಮಹಾಲೆ ಮುಂತಾದವರು ಇದ್ದರು.
ಇದನ್ನೂ ಓದಿ : ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ಇನ್ನಿಲ್ಲ