ಭಟ್ಕಳ (Bhatkal) : ಮುರುಡೇಶ್ವರ (Murudeshwar) ಕಡಲತೀರದಲ್ಲಿ ಪದೇ ಪದೇ ಸಂಭವಿಸಿದ ದುರಂತ ಸಾವುಗಳಿಗೆ (Beach Tragic) ಸಂಬಂಧಿಸಿದಂತೆ ಉತ್ತರ ಕನ್ನಡ (Uttara Kannada) ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮತ್ತು ಪ್ರವಾಸೋದ್ಯಮ ಇಲಾಖೆ (Tourism Department) ಉಪನಿರ್ದೇಶಕ ಜಯಂತ್ ಎಚ್.ವಿ ವಿರುದ್ಧ ಬೆಂಗಳೂರಿನ (Bengaluru) ಖ್ಯಾತ ವಕೀಲ, ಭಟ್ಕಳ ಮೂಲದ ನಾಗೇಂದ್ರ ನಾಯ್ಕ್ ಮುರುಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ದೂರು (Complaint) ನೀಡಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೦-೨೫, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಡಿ.೧೧ರಂದು ಮುಳಬಾಗಿಲು ಮೊರಾರ್ಜಿ ದೇಸಾಯಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ ೬ರಂದು ಇದೇ ಬೀಚ್ನಲ್ಲಿ ೧೭ ವರ್ಷದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ. ಪ್ರತಿ ವರ್ಷ ಮುರುಡೇಶ್ವರ (Murudeshwar) ಬೀಚ್ನಲ್ಲಿ ಜಲಕ್ರೀಡೆ (Water sports) ಚಟುವಟಿಕೆಗಳ ಮೂಲಕ ೩.೩೮ ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿದ್ದರೂ ಮೂಲಭೂತ ಜೀವ ಉಳಿಸುವ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಬೈಕ್ ಅಪಘಾತದಲ್ಲಿ ಓರ್ವ ಸಾವು, ಇನ್ನೊಬ್ಬಗೆ ಗಾಯ
ಜೀವ ಉಳಿಸುವ ಸಾಧನಗಳು, ವಾಚ್ಟವರ್ಗಳು, ಜೀವರಕ್ಷಕರು ಮತ್ತು ತುರ್ತು ಪ್ರತಿಕ್ರಿಯೆ ಕ್ರಮಗಳು ಬೀಚ್ನಿಂದ ಕಾಣೆಯಾಗಿವೆ. ಕರ್ನಾಟಕ (karnataka) ಪ್ರವಾಸೋದ್ಯಮ ನೀತಿ (Tourism policy) ಮತ್ತು ಸುಪ್ರೀಂ ಕೋರ್ಟ್ (Supreme Court) ಮಾರ್ಗಸೂಚಿಗಳ ಪ್ರಕಾರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕಡಲತೀರದಲ್ಲಿ ಮಾನವ ನಿರ್ಮಿತ ವಿಪತ್ತುಗಳು ಆಡಳಿತಾತ್ಮಕ ನಿರ್ಲಕ್ಷ್ಯದ ಪ್ರಮುಖ ಉದಾಹರಣೆಗಳಾಗಿವೆ. ಪ್ರವಾಸೋದ್ಯಮ ಚಟುವಟಿಕೆಗಳಿಂದ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದರೂ, ಸುರಕ್ಷತಾ ಕ್ರಮಗಳಿಗೆ ಹಣವನ್ನು ಖರ್ಚು ಮಾಡಲು ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮುರ್ಡೇಶ್ವರದಲ್ಲಿ ನಾಲ್ವರು ಮಕ್ಕಳ ಸಾವು
ಬಿಎನ್ನೆಸ್ ಸೆಕ್ಷನ್ ೧೦೬(ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), ೧೨೫ (ಜೀವಕ್ಕೆ ಅಪಾಯವನ್ನುಂಟುಮಾಡುವುದು), ಮತ್ತು ಐಪಿಸಿ ಸೆಕ್ಷನ್ ೫೦೩ (ಹಾನಿ ಉಂಟುಮಾಡುವ ಉದ್ದೇಶ) ಅಡಿಯಲ್ಲಿ ಲಕ್ಷ್ಮಿ ಪ್ರಿಯಾ ಮತ್ತು ಜಯಂತ್ ಹೆಚ್.ವಿ ವಿರುದ್ಧ ಪ್ರಕರಣದಾಖಲಿಸುವಂತೆ ದೂರಿನಲ್ಲಿ ಕೋರಲಾಗಿದೆ. ಈ ಕುರಿತು “ಭಟ್ಕಳ ಡೈರಿ”ಯೊಂದಿಗೆ ಮಾತನಾಡಿರುವ ಹೈಕೋರ್ಟ್ನ (Highcourt) ಹಿರಿಯ ವಕೀಲ ನಾಗೇಂದ್ರ ನಾಯ್ಕ, ಇಮೇಲ್ ಮತ್ತು ರಿಜಿಸ್ಟರ್ ಪೋಸ್ಟ್ ಮೂಲಕ ದೂರು ಸಲ್ಲಿಸಲಾಗಿದೆ. ಇದನ್ನು ಪರಿಗಣಿಸದೆ ಇದ್ದರೆ ಖಾಸಗಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಹಿಂದೂಗಳ ಬೃಹತ್ ಪ್ರತಿಭಟನೆ