ಭಟ್ಕಳ : ತಾಲೂಕಿನ  ಸರಕಾರಿ ಹಿರಿಯ ಪ್ರಾಥಮಿಕ ಬೆಣಂದೂರು ಶಾಲೆಯಲ್ಲಿ ಇತ್ತೀಚಿಗೆ ಕಂಪ್ಯೂಟರ್ ಕ್ಲಾಸ್, ಗೇಟ್ ಗೋಪುರ ಹಾಗೂ ಇಕೋ ಪಾರ್ಕ್ ಉದ್ಘಾಟಿಸಲಾಯಿತು.

ಇದನ್ನೂ ಓದಿ : ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯರಿಗೆ ವೈದಿಕ ಪ್ರಯೋಗ ನಿಷ್ಣಾತ ಪ್ರಶಸ್ತಿ

ಬೆಣಂದೂರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ

ಕ್ಷೇತ್ರ ಶಿಕ್ಷಣಾಧಿಕಾರಿ ವಿ ಡಿ ಮೊಗೇರ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಟ್ಕಳ ತಾಲೂಕಿನಲ್ಲಿ ಪ್ರಪ್ರಥಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಬೆಣಂದೂರು ಶಾಲೆಯಲ್ಲಿ ಇಕೋ ಪಾರ್ಕ್ ನಿರ್ಮಾಣವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಇಕೋ ಪಾರ್ಕ್ ಉದ್ಘಾಟಿಸಿದ ಶಿಕ್ಷಣ ಸಂಯೋಜಕಿ ಗೀತಾ ನಾಯ್ಕ

ಇಕೋ ಪಾರ್ಕ್ ಹೇಗಿದೆ ಗೊತ್ತಾ? ಈ ವಿಡಿಯೋ ನೋಡಿ    https://www.facebook.com/61555144611326/posts/pfbid02frXyAy7opfJT4mbJcbCSmiBDxXSYeVGR1pKfvqgQ7GVpeGMsaGDmW757oRwajT6Vl/?app=fbl

ಇಕೋ ಪಾರ್ಕ್ ನಿರ್ಮಾಣ
ಶಿಕ್ಷಣ ಸಂಯೋಜಕಿ ಗೀತಾ ನಾಯ್ಕ ವನಸಿರಿ ಇಕೋ ಪಾರ್ಕ್ ಉದ್ಘಾಟಿಸಿದರು. ಈ ವನಸಿರಿ ಇಕೋ ಪಾರ್ಕ್ ನಲ್ಲಿ ಔಷಧೀಯ ಗಿಡಗಳು, ಅರಣ್ಯ ಗಿಡಗಳು, ತೋಟಗಾರಿಕಾ ಸಸ್ಯಗಳು, ಹೂವಿನ ಗಿಡಗಳು, ವಿದ್ಯಾರ್ಥಿಗಳಿಗೆ ವಿಷಯಕ್ಕೆ ಸಂಬಂಧಪಟ್ಟ ಕಲಿಕೆಗೆ ಪೂರಕವಾದ ವಾತಾವರಣ, ಪರಿಸರದಲ್ಲಿ ಕುಳಿತು ಪಾಠ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಇದೆ.

ಕಂಪ್ಯೂಟರ್ ಕ್ಲಾಸ್ ಉದ್ಘಾಟಿಸಿದ ಎಸ್ಡಿಎಂಸಿ ಅಧ್ಯಕ್ಷ ಮಂಜಯ್ಯ ತಿಮ್ಮಪ್ಪ ನಾಯ್ಕ ಹಾಗೂ ಗ್ರಾಪಂ ಸದಸ್ಯೆ ಜ್ಯೋತಿ ಪರಮೇಶ್ವರ ನಾಯ್ಕ

ಎಸ್ ಡಿ ಎಂ ಸಿ ಅಧ್ಯಕ್ಷ ಮಂಜಯ್ಯ ತಿಮ್ಮಪ್ಪ ನಾಯ್ಕ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಜ್ಯೋತಿ ಪರಮೇಶ್ವರ್ ನಾಯ್ಕ ಕಂಪ್ಯೂಟರ್ ಕ್ಲಾಸ್ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಸೋಮಯ್ಯ ನಾಯ್ಕ ಗೋಪುರ ಉದ್ಘಾಟಿಸಿದರು.

ಪ್ರವೇಶದ್ವಾರ ಉದ್ಘಾಟಿಸಿದ ಗ್ರಾಪಂ ಸದಸ್ಯ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಸೋಮಯ್ಯ ನಾಯ್ಕ

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಗಣಿತ ವಿಜ್ಞಾನ ವಿಷಯದ ಕಲಿಕೆಗೆ ಸಂಬಂಧಪಟ್ಟಂತೆ ಕಿರುನಾಟಕ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಗೊಂಡರ ಜಾನಪದ ನೃತ್ಯ, ಭಜನೆ ಕುಣಿತ, ಏಕಪಾತ್ರಾಭಿನಯ, ಮಗ್ಗಿ ಕುಣಿತ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿತು.


ಅಧ್ಯಕ್ಷ ಮಂಜಯ್ಯ ತಿಮ್ಮಪ್ಪ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಿ ಆರ್ ಪಿ ಜಯಶ್ರೀ ಆಚಾರ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ ಎನ್ ನಾಯ್ಕ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಪರಮೇಶ್ವರ್ ಜಟ್ಟ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪುರವರ್ಗ ಹಾಗೂ ಬೆಳಕೆ ಕ್ಲಸ್ಟರ್ ನ ಶಿಕ್ಷಕರು, ಬೆಣಂದೂರು ಶಾಲೆಯ ಎಸ್ಡಿಎಂಸಿ ಸದಸ್ಯರು, ಪಾಲಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು, ಊರಿನ ನಾಗರಿಕರು, ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.