ಭಟ್ಕಳ (Bhatkal) : ಮಹಾಶಿವರಾತ್ರಿ (Maha Shivaratri) ಅಂಗವಾಗಿ ಬುಧವಾರ ಮುರ್ಡೇಶ್ವರದಲ್ಲಿ (Murudeshwar) ಮುಂಜಾನೆ ೩.೩೦ರಿಂದ ದೇವರ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿತ್ತು. ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ನಸುಕಿನ ಜಾವದಿಂದಲೇ ಭಕ್ತರ ಸಾಲು ದೇವಸ್ಥಾನದ ಹೊರಾಂಗಣದವರೆಗೂ ಬಂದಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೇವಸ್ಥಾನದಲ್ಲಿ ಶಿವರಾತ್ರಿ (Shivaratri) ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆಯಿತು. ಪರಶಿವನಿಗೆ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಮುಂತಾದ ಕಾರ್ಯಗಳು ನಡೆಯಿತು. ಮುರ್ಡೇಶ್ವರಕ್ಕೆ (Murdeshwar) ಭೇಟಿ ನೀಡಿದ ಭಕ್ತರು ಸಮುದ್ರಸ್ನಾನ ಮಾಡಿ ದೇವರಿಗೆ  ಅಭಿಷೇಕದೊಂದಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು.  ಸಮುದ್ರತೀರ ಮತ್ತು ದೇವಸ್ಥಾನದ ಸುತ್ತಮುತ್ತ ಜನಜಾತ್ರೆಯೇ ನೆರೆದಿತ್ತು.

ಇದನ್ನೂ ಓದಿ : Heatware Alert/ ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ

ನಸುಕಿನ ಜಾವ ೩.೩೦ಕ್ಕೆ ದೇವರ ದರ್ಶನಕ್ಕೆ ಅನುವುಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ಭಕ್ತರು ಮುರುಡೇಶ್ವರಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ  ಈ ಬಾರಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದು ಕಂಡುಬಂತು. ಅವರ ಜೊತೆಯಲ್ಲಿ ಮುರುಡೇಶ್ವರ ಮಹಿಳಾ ಭಜನಾ ಮಂಡಳದ ಸದಸ್ಯರು ಕೂಡ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ಇದನ್ನೂ ಓದಿ : lorry hit / ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಲಾರಿ ಡಿಕ್ಕಿ

ದರ್ಶನಕ್ಕೆ ಬಂದಂತಹ ಎಲ್ಲಾ ಭಕ್ತರಿಗೂ ಪಾನೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೇ ವೇಳೆ ಭಟ್ಕಳ ಪ್ರಭಾರಿ ಸಹಾಯಕ ಆಯುಕ್ತೆ ಕಾವ್ಯ ರಾಣಿ ಕೂಡ ತಮ್ಮ ಕುಟುಂಬ ಸಮೇತರಾಗಿ ಬಂದು ಶಿವನ ದರ್ಶನ ಪಡೆದರು.

ಇದನ್ನೂ ಓದಿ : collision/ ಗೂಡ್ಸ್‌ ರಿಕ್ಷಾ ಡಿಕ್ಕಿಯಾಗಿ ಬಾಲಕಿ ಸಹಿತ ಇಬ್ಬರಿಗೆ ಗಾಯ

ಶಿವರಾತ್ರಿಯಂದು ಮುರ್ಡೇಶ್ವರದಲ್ಲಿ ದರ್ಶನ ವ್ಯವಸ್ಥೆ ಹೇಗಿತ್ತು? ಪ್ರಭಾರಿ ಸಹಾಯಕ ಆಯುಕ್ತೆ ಕಾವ್ಯ ರಾಣಿ ಹೇಳಿದ್ದೇನು? ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : compete / ಜಾಲಿ ಪಪಂ ಕಟ್ಟಡ; ಕ್ರೆಡಿಟ್‌ಗಾಗಿ ಹಾಲಿ-ಮಾಜಿ ಶಾಸಕರ ಪೈಪೋಟಿ