ಭಟ್ಕಳ (Bhatkal): ಉತ್ತರ ಪ್ರದೇಶದ (Uttara Pradesh) ನರಸಿಂಹಾನಂದ ಸ್ವಾಮೀಜಿಯವರ ಮುಹ್ಮದ್ ಪೈಗಂಬರರ (Prophet Muhammed) ವಿರುದ್ಧ ಅವಹೇಳನ ವಿರುದ್ಧ ತಂಜೀಮ್ (Tanzeem) ಸಂಸ್ಥೆ ಕರೆ ನೀಡಿರುವ ಭಟ್ಕಳ ಬಂದ್ (Bhatkal Bandh) ಒಂದು ಸಮುದಾಯಕ್ಕೆ ಸೀಮಿತವಾಗಿದೆ. ಮುಸ್ಲಿಂ ಸಮುದಾಯದ ಅಂಗಡಿಗಳು ಬಂದ್ ಆಗಿದ್ದರೆ, ಮುಸ್ಲಿಮೇತರರ ಅಂಗಡಿಗಳು ಎಂದಿನಂತೆ ತೆರೆದಿವೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳವಾರ ಬೆಳ್ಳಿಗ್ಗೆ ಬಂದ್ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ತಮ್ಮ ತಂಜಿಮ್ ಸಂಸ್ಥೆ ನೀಡಿದ ಬಂದ್ ಕರೆಗೆ ಸಂಪೂರ್ಣ ಬಂದ್ ಬೆಂಬಲ ನೀಡಿ. ತಮ್ಮ ಅಂಗಡಿ ಮುಂಗಟ್ಟುಗಳು ಆಟೋ ರಿಕ್ಷಾ ಸೇರಿದಂತೆ ತಮ್ಮ ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ಬಂದ್ ಮಾಡುವ ಮೂಲಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ವಿಶೇಷವೇಂದರೆ ಮುಸ್ಲಿಂ ಸಮುದಾಯದವರು ಖರೀದಿಗೂ ರಸ್ತೆಗೆ ಬಾರದಿರುವುದು ಕಾಣುತ್ತಿದೆ. ಮುಸ್ಲಿಮರ ಅಂಗಡಿಗಳು ಹೆಚ್ಚಿರುವ ಕೇರಿ ರಸ್ತೆಗಳು ಮತ್ತು ಮುಖ್ಯ ರಸ್ತೆಯಲ್ಲಿ ಬಂದ್ ವಾತಾವರಣ ಕಾಣುತ್ತಿದೆ. ಜನರ ಓಡಾಟವೂ ಕಡಿಮೆಯಿದೆ.
ವಿಡಿಯೋ ಸಹಿತ ಇದನ್ನೂ ಓದಿ : ನರಸಿಂಹಾನಂದ ಸ್ವಾಮೀಜಿ ಬಂಧನಕ್ಕೆ ತಂಜೀಮ್ ಆಗ್ರಹ
ಆದರೆ, ತಂಜೀಮ್ ಸಂಸ್ಥೆ ಕರೆನೀಡಿರುವ ಭಟ್ಕಳ ಬಂದ್ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ತಂಜೀಮ್ ಸಂಸ್ಥೆ ಕರೆ ನೀಡಿದ್ದ ಬಂದ್ ಕರೆಗೆ ಮುಸ್ಲಿಮೇತರರು ಸ್ಪಂದಿಸದಿರುವುದು ಕಂಡುಬಂದಿದೆ. ಬಂದ್ ಗೆ ಕರೆ ನೀಡಿದ ತಂಜಿಮ್ ಸಂಸ್ಥೆ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಶಾಲಾ ಕಾಲೇಜುಗಳನ್ನ ಬಂದ್ ಮಾಡುವಂತೆ ಹಾಗೂ. ಹಿಂದೂ ಸಮುದಾಯದ ಬಾಂದವರು ಕೂಡ ನಮ್ಮ ಬಂದ್ ಗೆ ಬೆಂಬಲ ನೀಡ ಬೇಕೆಂದು ಕೋರಿಕೊಂಡಿದ್ದರು. ಮುಸ್ಲಿಮೇತರ ಅಂಗಡಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಮುಸ್ಲಿಮರ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆಗೆ ಇರುವ ಕೆಲ ಮುಸ್ಲಿಮೇತರ ವ್ಯಾಪಾರಸ್ಥರು ಮಾಲೀಕರ ಸೂಚನೆ ಹಿನ್ನೆಲೆ ಬಂದ್ ಮಾಡಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ : ಉತ್ತರ ಪ್ರದೇಶ ಸ್ವಾಮೀಜಿ ವಿರುದ್ಧ ಭಟ್ಕಳದಲ್ಲಿ ದೂರು
ಮೀನು ಮಾರುಕಟ್ಟೆಯಲ್ಲಿಯೂ ಕೂಡ ಮುಸ್ಲಿಂ ಸಮುದಾಯದ ಮೀನು ವ್ಯಾಪಾರಿಗಳನ್ನು ಬಿಟ್ಟು ಮತ್ತೆಲ್ಲ ಮೀನು ವ್ಯಾಪಾರಿಗಳು ತಮ್ಮ ವ್ಯವಹಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಹಿಂದೂ ಸಮುದಾಯದ ಬಾಂದವರು ಎಂದಿನಂತೆ ತಮ್ಮ ಕೆಲಸ ಕಾರ್ಯ, ವ್ಯಾಪಾರ ವ್ಯವಹಾರ, ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಎಂದಿನಂತೆ ಇರುವ ವಾಹನ ಓಡಾಟ, ಜನರ ಓಡಾಟ ಮತ್ತು ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಭಟ್ಕಳ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದ ಆಟೋ ತಂಗುದಾಣದಲ್ಲಿ ಆಟೋಗಳು ಬಾಡಿಗೆದಾರರಿಗಾಗಿ ಎದುರು ನೋಡುತ್ತಿವೆ.
ಇದನ್ನೂ ಓದಿ : ತಾಲೂಕು ಸೌಧದೆದುರು ಪ್ರತಿಭಟನೆ; ಮೆರವಣಿಗೆಯಿಲ್ಲ
ಬಂದ್ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನಾದ್ಯಂತ ಪೋಲಿಸ ಬಂದೋಬಸ್ತ್ ಏರ್ಪಡಿಸಲಾಗಿದ್ದು. ಭಟ್ಕಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮುಂಜಾನೆಯಿಂದಲೇ ಡಿವೈಎಸ್ಪಿ, ಸಿ.ಪಿ.ಐ. ಸೇರಿದಂತೆ ಪೊಲೀಸ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಭಾಗದಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.